ಹುಬ್ಬಳ್ಳಿ: ಅಪ್ರಾಪ್ತ ಬಾಲಕಿಯರ ಜೊತೆ ಅನುಚಿತವಾಗಿ ವರ್ತನೆ ತೋರಿದ ಹಿನ್ನೆಲೆ ಸಾರ್ವಜನಿಕರೇ ಪೊಲೀಸ್ ಹೆಡ್ ಕಾನ್ಸೆಬಲ್ ನನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶಬರಿನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಹುಬ್ಬಳ್ಳಿಯ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಖದೀಮನವರ ಎಂಬಾತನೇ ತಾನು ವಾಸವಿದ್ದ ಮನೆಯ ಅಕ್ಕಪಕ್ಕದಲ್ಲಿ ವಾಸವಿದ್ದ ಬಾಲಕಿಯರ ಜೊತೆ ಅನುಚಿತವಾಗಿ ವರ್ತನೆ ಕಂಡು ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು ನಡು ರಸ್ತೆಯಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಹಲವು ದಿನಗಳಿಂದ ಕೂಡ ಈ ಪೊಲೀಸಪ್ಪ ಖದೀಮನವರ ಏರಿಯಾದಲ್ಲಿ ಅನುಚಿತವಾಗಿ ವರ್ತನೆ ತೋರುತ್ತಿದ್ದ ಆರೋಪ ಕೂಡಾ ಕೇಳಿ ಬಂದಿತ್ತು. ಆದ್ರೆ ಇಂದು ಬೆಳಿಗ್ಗೆ ಹೆಡ್ ಕಾನ್ಸೆಬಲ್ ರೆಡ್ ಹ್ಯಾಂಡ್ ಆಗಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಹಿನ್ನೆಲೆ ಮನಸೋ ಇಚ್ಛೆ ಥಳಿಸಿದ್ದಾರೆ.ಶಬರಿ ನಗರದಲ್ಲಿನ ತನ್ನ ಮನೆಯಲ್ಲಿ ಈತ ಒಂಟಿಯಾಗಿ ವಾಸವಿದ್ದ ಎಂಬ ಮಾಹಿತಿ ಕೂಡಾ ಸಾರ್ವಜನಿಕರು ನೀಡಿದ್ದಾರೆ.
ಹೆಡ್ ಕಾನ್ಸೆಬಲ್ ವಿರುದ್ಧ ಇದೀಗ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಉತ್ತರ ವಿಭಾಗದ ಎಸಿಪಿ ಶಿವಪ್ರಕಾಶ್ ನಾಯಕ್ ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದು ಹೆಡ್ ಕಾನ್ಸೆಬಲ್ ಖದೀಮನವರ ವಿರುದ್ಧ ಪ್ರಕರಣ ಇದೀಗ ದಾಖಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

