Breaking News

ಸಚಿವ ಪ್ರಿಯಾಂಕ್ ಖರ್ಗೆಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ತೇಜಸ್ವಿ ಸೂರ್ಯ

ಹುಬ್ಬಳ್ಳಿ : ಸಚಿವ ಪ್ರಿಯಾಂಕ್ ಖರ್ಗೆಗೆ ಏನು ಕೆಲಸ ಇಲ್ಲ ಅನ್ಸುತ್ತೆ, ಎಫ್‌ಐಆ‌ರ್ ಗಳನ್ನು ಹುಡುಕಿ ಹುಡುಕಿ ಹಾಕಿಸುವ ಕೆಲಸ ಮಾಡ್ತಾರೆಂದು ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ, ಅವರು ಹಾಕಿರೋ ಕೇಸ್ ಗಳಿಗೆ ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿ ವಾಪಸ್ ಕಳಿಸ್ತಾರೆ. ಪ್ರಿಯಾಂಕ್ ಖರ್ಗೆ ಕೇಸ್ ಹಾಕೋದನ್ನೇ ಫುಲ್ ಟೈಮ್ ಕೆಲಸ ಮಾಡಿಕೊಂಡಿದ್ದಾರೆ. ತಮ್ಮ ಮೇಲೆ ಎಫ್‌ಐಆ‌ರ್ ದಾಖಲಾದ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಸೂರ್ಯ, ನಿನ್ನೆ ಜೆಪಿಸಿ ಕಮಿಟಿ ಅಧ್ಯಕ್ಷರು ಬಂದಾಗ ಹಾವೇರಿಯ ರೈತನ ಅಹವಾಲು ಪಡೆದ್ವಿ, ಅದರಲ್ಲಿ ರೈತನ ಜಮೀನು ವಕ್ಸ್ ಎಂದು ಬದಲಾಯಿಸಿದ ಕಾರಣ, ಸಣ್ಣಪ್ಪ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದ. ಆ ಬಗ್ಗೆ ಮಾಧ್ಯಮಗಳಲ್ಲೂ ಕೂಡ ವರದಿ ಬಂದಿದೆ. ರೈತನ ಕುಟುಂಬಸ್ಥರು ಮಾಧ್ಯಮದ ಎದುರು ಮಾತನಾಡಿದ್ದು ಪ್ರಸಾರ ಆಗಿದ್ದು, ಒಂದು ವೆಬ್ ಈ ಸುದ್ದಿಯನ್ನು ಪ್ರಸಾರ ಮಾಡಿರ್ತಾರೆ. ಅದನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಅಂತ ರೀ ಟ್ವಿಟ್ ಹಾಕೇನೆ, ಹಾವೇರಿ ಎಸ್.ಪಿ ಈ ರೀತಿ ಆಗಿಲ್ಲ ಅಂತ ಟ್ವಿಟ್ ಮಾಡಿದ್ರು ಎಂದರು.

Share News

About Shaikh BigTv

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *