Breaking News

ಹುಬ್ಬಳ್ಳಿಯಲ್ಲಿ ದೇವಿ ಮೂರ್ತಿಗೆ ಹಾಕಿದ್ದ ಆಭರಣ ಕಳ್ಳತನ

ಹುಬ್ಬಳ್ಳಿ: ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಷ್ಮೀ ದೇವಿಗೆ ಹಾಕಿದ್ದ 3.50 ಲಕ್ಷ ರೂ. ಮೌಲ್ಯದ 70 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ, ಸ್ವಾಮಿ ವಿವೇಕಾನಂದ ಮಾರ್ಗದ ಶಂಭಾಗಿ ಲೇಔಟ್‌ನಲ್ಲಿ ನಡೆದಿದೆ.

ಅಮಿತ್ ಕಾಟವೆ ಎಂಬುವರ ಮನೆಯ ಅಡುಗೆ ಕೋಣೆಯಲ್ಲಿ ದೀಪಾವಳಿ ಹಬ್ಬದ ನಿಮಿತ್ತ, ಲಕ್ಷ್ಮೀ ಪೂಜೆ ಮಾಡಿದ್ದಾಗ ದೇವಿಯ ಮೂರ್ತಿಗೆ ಆಭರಣ ಹಾಕಿದ್ದರು. ರಾತ್ರಿ ಕಳ್ಳರು ಅಡುಗೆ ಮನೆಯ ಕಿಟಕಿ ತೆಗೆದು, ಕೋಲಿನ ಸಹಾಯದಿಂದ ಮೂರ್ತಿಗೆ ಹಾಕಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಈ ಕುರಿತು ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

Share News

About Shaikh BigTv

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *