ಹುಬ್ಬಳ್ಳಿ: ಬಿಎಸ್ ವೈ ಹಾಗೂ ರಾಮುಲು ಮೇಲೆ ಕೋವಿಡ್ ಹಗರಣ ತನಿಖೆ ವಿಚಾರ ಸಚಿವ ಸಂಪುಟಕ್ಕೆ ಇನ್ನೂ ಬಂದಿಲ್ಲ ಸಬ್ ಕಮೀಟಿ ಪರಿಶೀಲನೆ ಮಾಡುತ್ತಿದೆ, ಸಬ್ ಕಮೀಟಿ ವರದಿ ನೀಡಿದ ಕೂಡಲೇ ತನಿಖೆ ಶುರುವಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಇದು ಯಾವುದೇ ಗೊಡ್ಡು ಬೆದರಿಕೆ ಅಲ್ಲಾ ಮೈಕೆಲ್ ಕುನ್ನಾ ಅವರ ಅಧ್ಯಕ್ಷತೆಯಲ್ಲಿ ನೀಡಿರುವ ವರದಿ ಆಧಾರದ ಮೇಲೆ ಕೇಸ್ ಹಾಕಲಾಗಿದೆ ಗೊಡ್ಡು ಬೆದರಿಕೆ ಅಂದ್ರೆ ಏನು..? ಸಮಿತಿ ಈ ಬಗ್ಗೆ ವರದಿ ನೀಡಿದೆ ಅದರಲ್ಲಿಏನು ಗೊಡ್ಡು ಬೆದರಿಕೆ ಇದೆ ? ಸಬ್ ಕಮೀಟಿಯಿಂದ ವರದಿ ಬಂದ ಮೇಲೆ ಎಲ್ಲವೂ ಆರಂಭವಾಗುತ್ತೆ, ನ್ಯಾಯಾಂಗ ಇರೋದು ನ್ಯಾಯ ಕೊಡುವುದಕ್ಕೆ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡೋಕೆ ನ್ಯಾಯಾಂಗ ಇದೆ ಎಂದರು.
ಮಾಜಿ ಸಿಎಂ ಬಿಎಸ್ ವೈ ಗೆ ಕೊಲೆ ಯತ್ನ ಪ್ರಕರಣ ವಿಚಾರ ಯಾಕೆ ಆವಾಗ ಪ್ರಕರಣ ದಾಖಲು ಮಾಡಿಲ್ಲ ಕೊಲೆ ಮಾಡೋಕೆ ಪ್ರಯತ್ನ ಮಾಡಿದಮೇಲೆ ಯಾಕೆ ಅವರ ಮೇಲೆ ಕೇಸ್ ದಾಖಲು ಮಾಡಲಿಲ್ಲ…? ಈಗ್ಯಾಕೆ ಅದರ ಬಗ್ಗೆ ಹೇಳುತ್ತಿದ್ದಾರೆ..? ನ್ಯಾಯಾಲಯದ ಮೇಲೆ ಅವರಿಗೆ ನಂಬಿಕೆನೇ ಇಲ್ಲ ಎಂದು ಸಿಎಂ ತಿಳಿಸಿದರು.
ಕರ್ನಾಟಕದಲ್ಲಿ 700 ಕೋಟಿ ಅಕ್ರಮ ಹಣದಿಂದ ಕಾಂಗ್ರೆಸ್ ಚುನಾವಣೆ ಮಾಡುತ್ತಿದೆ ಎಂಬ ಪ್ರಧಾನಿ ಮೋದಿ ಆರೋಪ ವಿಚಾರವಾಗಿ ಒಬ್ಬ ಪ್ರಧಾನಿ ಆದವರು ಈ ರೀತಿ ಹೇಳಿಕೆ ನೀಡೋದು ಅವರ ಸ್ಥಾನಕ್ಕೆ ಅಗೌರವ ತರುವಂತದ್ದು ಯಾರಾದರೂ ಅಬಕಾರಿಯಲ್ಲಿ 700 ಕೋಟಿ ಮಾಡೋಕಾಗುತ್ತಾ..? ಅಬಕಾರಿ ಇಲಾಖೆಯವರು ನಮಗೆ ಯಾಕೆ ಹಣ ಕೊಡ್ತಾರೆ..? ಒಬ್ಬ ಪ್ರಧಾನಮಂತ್ರಿ ಸುಳ್ಳು ಹೇಳಬೇಕಾದ್ರೆ ಇತಿಮಿತಿ ಇರಬೇಕು ಬಿಜೆಪಿಯವರು ರಾಜಕೀಯಕ್ಕಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ 17 ಜನ ಎಂಎಲ್ ಎ ಗಳನ್ನಕೊಂಡುಕೊಂಡರಲ್ಲ ಆ ಹಣ ಎಲ್ಲಿಂದ ಬಂತು..? ಸಿಎಂ ಆಗಬೇಕಾದ್ರೆ 2 ಸಾವಿರ ಕೋಟಿ ಕೊಡಬೇಕು ಅಂತಾ ಯತ್ನಾಳ್ ಅವರೇ ಹೇಳಿದ್ರು ಅದು ಯಾವ ಹಣ..?ಇದು ನಾನು ಹೇಳಿರೋದಲ್ಲ ಬಿಜೆಪಿಯ ಯತ್ನಾಳ್ ಅವರೇ ಹೇಳಿದ್ದು ಯಡಿಯೂರಪ್ಪ, ಬೊಮ್ಮಾಯಿ 2000 ಕೋಟಿ ಕೊಟ್ಟು ಸಿಎಂ ಆಗಿದ್ರು ಅಂತಾ ಯತ್ನಾಳ್ ಅವರೇ ಹೇಳಿದ್ರು ಆ ಹಣ ಎಲ್ಲಿಂದ ಓಡಿ ಬಂತು ಎಂದು ಬಿಜೆಪಿ ನಾಯಕರ ಆರೋಪಕ್ಕೆ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದರು.
ಸ್ನೇಹಮಯಿ ಕೃಷ್ಣ ಮತ್ತೊಂದು ದಾಖಲೆ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು ಚೆಕ್ ಮೂಲಕ ಏನಾದ್ರೂ ಕೊಟ್ಟಿದ್ದಾರಾ…? ದಾನಪತ್ರ ಮಾಡಿಕೊಳ್ಳೋಕೆ ನನ್ನ ಭಾಮೈದ ಕೊಟ್ಟಿದ್ದು ನಾನು ನನ್ನ ಹೆಂಡತಿ ಸಹಿಪತ್ರ ಮಾಡೋಕೆ ಕೊಟ್ಟಿದ್ದೇವೆ ಯಾವ ತಹಶೀಲ್ದಾರರೂ ಕೊಟ್ಟಿಲ್ಲ ಸಬ್ ರೆಜಿಸ್ಟ್ರಾರ್ ಕೊಟ್ಟಿಲ್ಲ ಎಲ್ಲವೂ ಸುಳ್ಳು ಹೇಳುತ್ತಾರೆ ಅವರು ಹೇಳಿದ್ರು ಅಂತಾ ನೀವು ಕೇಳ್ತೀರಾ ಎಂದು ಸಿಎಂ ಗರಂ ಆದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

