ಕುಂದಗೋಳ : ದಾಸ ಶ್ರೇಷ್ಠ ಸಂತ ಕನಕದಾಸರ ಜಯಂತಿ ಆಚರಣೆಯನ್ನು ಕುಂದಗೋಳ ತಾಲೂಕು ಆಡಳಿತದ ವತಿಯಿಂದ ಶಾಸಕ ಎಂ.ಆರ್.ಪಾಟೀಲ್ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಾನಂದ ಬೆಂತೂರ ಅವರ ಉಪಸ್ಥಿತಿಯಲ್ಲಿ ಆಚರಿಸಲಾಯಿತು.
ತಹಶೀಲ್ದಾರ್ ರಾಜು ಮಾವರಕರ ನೇತೃತ್ವದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕನಕದಾಸರ ಜಯಂತಿ ಆಚರಣೆ ಮಾಡಲಾಯಿತು.
ಬಳಿಕ ಶಾಸಕ ಎಂ.ಆರ್.ಪಾಟೀಲ್ ಹಾಗೂ ಶಿವಾನಂದ ಬೆಂತೂರ ಅವರು ಮಾತನಾಡಿ ಕನಕದಾಸರು ಹಿರಿಮೆ ತಿಳಿಸಿದರು, ಈ ವೇಳೆ ಶಿಕ್ಷಣದಲ್ಲಿ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳು ಸೇರಿದಂತೆ ಗಣ್ಯರಿಗೆ ಸನ್ಮಾನ ಗೌರವವನ್ನು ತಾಲೂಕು ಆಡಳಿತದ ಮೂಲಕ ಸಲ್ಲಿಸಲಾಯಿತು.
ಬಳಿಕ ಉಪನ್ಯಾಸಕರಿಂದ ಕನಕದಾಸರ ಕುರಿತು ಉಪನ್ಯಾಸ ನೆರವೇರಿತು. ಈ ಸಂದರ್ಭದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಧುರೀಣ ಅರವಿಂದಪ್ಪ ಕಟಗಿ, ಲಕ್ಷ್ಮಣ ರಂಗನಾಯ್ಕರ, ನಿರಂಜನಯ್ಯ ಮಣಕಟ್ಟಿಮಠ, ಬಸವರಾಜ ಹರವಿ, ಶಂಕರಗೌಡ ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

