Breaking News

ಹಂಪಿ ಪ್ರವಾಸಕ್ಕೆ ಹೊರಟ ಶಾಲಾ ಮಕ್ಕಳಿದ್ದ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: ತಪ್ಪಿದ ಭಾರಿ ಅನಾಹುತ

ಕೊಪ್ಪಳ : ವಿಜಯನಗರ ಜಿಲ್ಲೆಯ ಹಂಪಿ ಪ್ರವಾಸಕ್ಕೆ ಎಂದು ಕಲ್ಬುರ್ಗಿ ಜಿಲ್ಲೆಯ ಗುರುಮಿಟ್ಕಲ್ ನ ಶಾಲಾ ಮಕ್ಕಳಿದ್ದ ಕೆಎಸ್‌ಆರ್‌ಟಿಸಿ ಬಸ್ ಒಂದು ಪಲ್ಟಿಯಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬಳಿ ನಡೆದಿದೆ. ಆದರೆ ಅದೃಷ್ಟವಶಾತ್ ಬಸ್ನಲ್ಲಿದ್ದ ಎಲ್ಲಾ ಮಕ್ಕಳು ಕೂಡ ಸೇಫ್ ಆಗಿದ್ದಾರೆ.
ಕಲಬುರಗಿಯ ಗುರುಮಿಟ್ಕಲ್‌ನ ಶಾಲಾ ಮಕ್ಕಳಿದ್ದ ಸಾರಿಗೆ ಬಸ್‌ ಗಂಗಾವತಿಯ ಮರಳಿ ಸಮೀಪ ರಸ್ತೆ ಬದಿಯ ಹೊಲಕ್ಕೆ ಉರುಳಿದೆ, ಇಂದು ಬೆಳಗ್ಗೆ 4:30ರ ಸುಮಾರಿಗೆ ಘಟನೆ ನಡೆದಿದೆ. ಅದೃಷ್ಟವಶಾತ್, ಬಸ್‌ನಲ್ಲಿದ್ದ 60 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓರ್ವ ವಿದ್ಯಾರ್ಥಿಗೆ ಸಣ್ಣ ಪ್ರಮಾಣದ ಗಾಯವಾಗಿದೆ.
ಶಾಲಾ ಮಕ್ಕಳು ಬುಧವಾರ ರಾತ್ರಿ ಪ್ರವಾಸ ಹೊರಟಿದ್ದರು ಬೆಳಗ್ಗೆ ಮರಳಿ ಸಮೀಪ ಪೇಪರ್ ಸಾಗಿಸುವ ವಾಹನ ರಸ್ತೆ ಮಧ್ಯೆ ಎದುರಾಗಿದೆ. ಚಾಲಕ ಸದಾಶಿವಯ್ಯ ಸಂಭಾವ್ಯ ಅಪಘಾತ ತಪ್ಪಿಸಲು ಹೋಗಿದ್ದರಿಂದ ನಿಯಂತ್ರಣ ಕಳೆದುಕೊಂಡ ಬಸ್ ಅಪಘಾತಕ್ಕೀಡಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *