ಹುಬ್ಬಳ್ಳಿ: ವಾಣಿಜ್ಯ ನಗರದ ಪ್ರಸಿದ್ಧ ಉಣಕಲ್ ಕೆರೆ ಒಂದು ಇತಿಹಾಸ ಹೊಂದಿದೆ. ಈ ಕೆರೆಗೆ ಚನ್ನಬಸವೇಶ್ವರ ಸಾಗರ ಹೆಸರು ಇಡಲು ಉತ್ತರ ಕರ್ನಾಟಕ ಜನಶಕ್ತಿ ಸೇನಾ ಸಂಸ್ಥಾಪಕ ಎಸ್ ಎಸ್ ಶಂಕರಣ್ಣ ನಿರಂತರ ಹೋರಾಟ ಮಾಡಿದ್ದರು, ಆ ಹೋರಾಟಕ್ಕೆ ಇದೀಗ ಜಯ ಸಿಕ್ಕಿದೆ.
ಹೌದು, ಉಣಕಲ್ ಕೆರೆ ಗೆ ಚನ್ನಬಸವೇಶ್ವರ ಸಾಗರ ಹೆಸರು ನಿರಂತರವಾಗಿ ಹೋರಾಟ ನಡೆದಿದ್ದು, ಇದೀಗ ಹುಬ್ಬಳ್ಳಿ ಧಾರವಾಡ ಪಾಲಿಕೆ ಸಾಮಾನ್ಯ ಸಭೆಯಲ್ಲಿ
ಉಣಕಲ್ ಚನ್ನಬಸವೇಶ್ವರ ಜಲ ಸಾಗರ ಎಂದು ನಾಮಕರಣಕ್ಕೆ ಟರಾವ್ ಪಾಸ್ ಮಾಡಲಾಗಿದ್ದು, ಇದೀಗ ಉಣಕಲ್ ಕೆರೆ ಚನ್ನಬಸವೇಶ್ವರ ಸಾಗರ ಎಂದು ನಾಮಕರಣ ಮಾಡಲಾಗಿದೆ.
ಮಳೆ , ಚಳಿ ಎನ್ನದೆ ಎಸ್ ಎಸ್ ಶಂಕರಣ್ಣ ಅವರು ಸತತವಾಗಿ ಹೋರಾಟ ಮಾಡಿದ್ದು,ಈ ಹೋರಾಟಕ್ಕೆ ಜಯ ಸಿಕ್ಕಿದ್ದು ಸಂತಸ ವ್ಯಕ್ತವಾಗಿದೆ. ನಿರಂತರ ಪರಿಶ್ರಮ ಕ್ಕೆ ಜಯ ಸಿಕ್ಕೆ ಸಿಗುತ್ತದೆ ಎಂಬುದಕ್ಕೆ ಇದೊಂದು ಮಾದರಿ ಸಾಕು.
bigtvnews | Hubli Dharwad News | Kannada News | Karnataka News Hubli News | News In Hubli | Local news





