ಹುಬ್ಬಳ್ಳಿ : ನಗರದ ಗವಳಿಗಲ್ಲಿಯಲ್ಲಿ ಚಿನ್ನದ ವ್ಯಾಪಾರಿ ಶುಭಂ ಪಾಟೀಲ ಅವರಿಗೆ ಮತ್ತೊಬ್ಬ ಚಿನ್ನದ ವ್ಯಾಪಾರಿ ಮಹಾರಾಷ್ಟ್ರದ ಸಾಂಗ್ಲಿಯ ಶರದ್ ಸರ್ವೆ ಎಂಬುವವರು 1.27 ಕೋಟಿ ಮೌಲ್ಯದ ಎರಡು ಚಿನ್ನದ ಗಟ್ಟಿ ಪಡೆದು ಹಣ ನೀಡದೆ ವಂಚಿಸಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಣೇಶ ಪಾರ್ಕ್‌ನ ಶುಭಂ ಅವರು ಹುಬ್ಬಳ್ಳಿ ಬುಲಿಯನ್ ಹಾಗೂ ಆರೋಪಿ ಶರದ್ ಓಂ ಬುಲಿಯನ್ ಹೆಸರಿನಲ್ಲಿ ಗವಳಿಗಲ್ಲಿಯಲ್ಲಿ ಬಂಗಾರದ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದರು. ಶುಭಂ ಹಾಗೂ ಅವರ ತಂದೆಯ ಜೊತೆ ಶರದ್ 15 ವರ್ಷಗಳಿಂದ ಬಂಗಾರ ವ್ಯವಹಾರ ನಡೆಸುತ್ತ ಬಂದಿದ್ದರು. ನವೆಂಬರ್ 1ರಂದು ಎರಡು ಚಿನ್ನದ ಗಟ್ಟಿ ಪಡೆದು, ಎರಡು ದಿನ ಬಿಟ್ಟು ಹಣ ನೀಡುವುದಾಗಿ ಹೇಳಿದ್ದರು. ನಂತರ ಅವರನ್ನು ಸಂಪರ್ಕಿಸಲು ಮುಂದಾದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ಬಗ್ಗೆ ಇತರೆ ಅಂಗಡಿಯವರಲ್ಲಿ ಶುಭಂ ವಿಚಾರಿಸಿದಾಗ, ಅವರಿಂದಲೂ ಬಂಗಾರ ಖರೀದಿಸಿ ವಂಚಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





