Breaking News

9 ವಿವಿಧ ಪ್ರತಿಷ್ಠಾನ, ಟ್ರಸ್ಟ್ ಗಳಿಗೆ ಅಧ್ಯಕ್ಷ, ಸದಸ್ಯರ ನೇಮಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಕನ್ನಡ ಸಂಸ್ಕೃತಿ ಇಲಾಖೆಯಡಿ ಕಾರ್ಯ ನಿರ್ವಹಿಸುವ 9 ವಿವಿಧ ಪ್ರತಿಷ್ಠಾನ ಮತ್ತು ಟ್ರಸ್ಟ್‌ಗಳ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಿ ಸರಕಾರ ಆದೇಶಿಸಿದೆ.
ಶಿವಮೊಗ್ಗದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನಕ್ಕೆ ಡಾ| ಬಿ.ಎಲ್‌. ಶಂಕರ್‌ ಅಧ್ಯಕ್ಷತೆ, ಸೂಳೇಬಾವಿಯ ಪಿ.ಬಿ.ದುತ್ತರಗಿ ಟ್ರಸ್ಟ್‌ಗೆ ಸಂಗಪ್ಪ ಕಲ್ಲಪ್ಪ ಕೊನೆಸಾಗರ ಅಧ್ಯಕ್ಷತೆ, ಉಡುಪಿಯ ಡಾ| ಶಿವರಾಮ ಕಾರಂತ ಟ್ರಸ್ಟ್‌ಗೆ ಗಣನಾಥ ಎಕ್ಕಾರು ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಿಸಲಾಗಿದೆ.
ಮಂಡ್ಯದ ಪು.ತಿ.ನ. ಟ್ರಸ್ಟ್‌ಗೆ ಮೈಸೂರಿನ ಎಂ. ಕೃಷ್ಣಗೌಡ ಅಧ್ಯಕ್ಷರಾಗಿದ್ದಾರೆ.
ಬಾಗಲಕೋಟೆಯ ಕವಿಚಕ್ರವರ್ತಿ ರನ್ನ ಪ್ರತಿಷ್ಠಾನಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷತೆ ಯಲ್ಲಿ, ವಿಜಯಪುರದ ಹಲಸಂಗಿ ಗೆಳೆಯರ ಟ್ರಸ್ಟ್‌ಗೆ ವಿಜಯಪುರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ, ಬೆಳಗಾವಿಯ ಡಾ| ಬಸವರಾಜಕಟ್ಟಿಮನಿ ಪ್ರತಿಷ್ಠಾನಕ್ಕೆ ರಾಯಭಾಗದ ಡಾ| ಯಲ್ಲಪ್ಪ ಹಿಮ್ಮಡಿ ಅಧ್ಯಕ್ಷತೆಯಲ್ಲಿ, ಬೆಳಗಾವಿ ಬೇಟಗೇರಿ ಕೃಷ್ಣಶರ್ಮ ಟ್ರಸ್ಟ್‌ಗೆ ಧಾರವಾಡದ ಡಾ| ವಿನಯ ನಾಯಕ ಅಧ್ಯಕ್ಷತೆಯಲ್ಲಿ ಸಮಿತಿ ನೇಮಿಸಿದೆ. ಮಂಡ್ಯದ ಕೆ.ಎಸ್‌. ನರಸಿಂಹಸ್ವಾಮಿ ಟ್ರಸ್ಟ್‌ಗೆ ಕೇವಲ ಸದಸ್ಯರು ಹಾಗೂ ಕಾರ್ಯದರ್ಶಿಯನ್ನು ನೇಮಿಸಿದೆ. ಅಧಿಕಾರಾವಧಿ 3 ವರ್ಷಗಳದ್ದಾಗಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *