Warning: Undefined array key "wpdb" in /home/eamphica/public_html/wp-content/mu-plugins/lumen-plugin.php on line 5616
ಉತ್ತರದ ಸಮಗ್ರ ಅಭಿವೃದ್ಧಿಗಾಗಿ ಪಂಚ ತೀರ್ಮಾನ: ಮೂಲಸೌಕರ್ಯಕ್ಕೆ ₹4 ಸಾವಿರ ಕೋಟಿ ಘೋಷಣೆ – bigtvnews | Hubli Dharwad News | Kannada News | Karnataka News
Breaking News

ಉತ್ತರದ ಸಮಗ್ರ ಅಭಿವೃದ್ಧಿಗಾಗಿ ಪಂಚ ತೀರ್ಮಾನ: ಮೂಲಸೌಕರ್ಯಕ್ಕೆ ₹4 ಸಾವಿರ ಕೋಟಿ ಘೋಷಣೆ

ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ವಿಧಾನಸಭೆಯಲ್ಲಿ ನಡೆದ ಮೂರು ದಿನಗಳ ಚರ್ಚೆ ಬೆನ್ನಲ್ಲೇ ರಾಜ್ಯ ಸರ್ಕಾರ ಉತ್ತರದ ಸಮಗ್ರ ಅಭಿವೃದ್ಧಿಗಾಗಿ ಪಂಚ ತೀರ್ಮಾನ ಪ್ರಕಟಿಸಿದೆ. ‘ನಮ್ಮ ಬದ್ಧತೆ ಪ್ರಶ್ನಾತೀತ, ನಮ್ಮ ಗುರಿ ಜನಕಲ್ಯಾಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಗುರುವಾರ ಸಿಎಂ ಈ ಸಿಹಿ ಸುದ್ದಿ ಪ್ರಕಟಿಸಿದರು. ಮುಖ್ಯವಾಗಿ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಲೋಕೋಪಯೋಗಿ ಇಲಾಖೆಯಲ್ಲಿ ಅಪೆಂಡಿಕ್ಸ್- ಇ ನಡಿ 4 ಸಾವಿರ ಕೋಟಿ ರೂ. ಹಾಗೂ ಗ್ರಾಮೀಣ ರಸ್ತೆ ಅಭಿವೃದ್ಧಿಗೆ 2 ಸಾವಿರ ಕೋಟಿ ರೂ. ನೀಡುವುದಾಗಿ ಘೋಷಿಸಿದರು.
ಈ ಘೋಷಣೆ ನಡುವೆಯೇ, ‘ಸರ್ಕಾರದ ಬೊಕ್ಕದಲ್ಲಿ ಹಣ ಇಲ್ಲ. ಆದರೂ ಆರು ಸಾವಿರ ಕೋಟಿ ರೂ. ಹಣ ಕೊಡುತ್ತೇವೆಂದು ಸಿಎಂ ಹೇಳಿದ್ದಾರೆ. ಈ ಹಣ ಎಲ್ಲಿಂದ ಹೊಂದಿಸುತ್ತಾರೆಂದು ಹೇಳಿಲ್ಲ, ಹಾಗೆಯೇ ಘೋಷಿಸಿರುವ ಇಷ್ಟು ಹಣ ಅಭಿವೃದ್ಧಿಗೆ ಸಾಲುವುದಿಲ್ಲ’ ಎಂದು ಪ್ರತಿಪಕ್ಷ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತು.
ಉತ್ತರ ಕರ್ನಾಟಕದ ಜನರ ಬಗ್ಗೆ ನಮ್ಮ ಬದ್ಧತೆಯನ್ನು ಪ್ರಶ್ನಿಸುವಂತಿಲ್ಲ. ಈ ಭಾಗದ ಜನರ ಬಗ್ಗೆ ನನಗೆ ವಿಶೇಷ ಪ್ರೀತಿ ಮತ್ತು ಕಾಳಜಿಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಗುರುವಾರ ಮಾತನಾಡಿದ ಅವರು, ಹದವಾದ ಮಳೆ, ಬಿಸಿಲುಗಳಿದ್ದರೆ ಚಿನ್ನವನ್ನೇ ದೇಶಕ್ಕಾಗಿ ಬೆಳೆದು ಕೊಡುತ್ತೇವೆ ಎಂಬ ಉತ್ಸಾಹ ಈ ಭಾಗದ ಜನರಿಗಿದೆ. ಈ ನೆಲದ ಕೂಡು ಬಾಳುವೆಯ ಸಂಸ್ಕೖತಿಯನ್ನು ನಾನು ಗೌರವಿಸುತ್ತೇನೆ. ನಾವು ಯಾವುದೇ ಬೆಲೆ ತೆತ್ತಾದರೂ ಇದನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಸಿಎಂ ಹೇಳಿದರು.
ಕಳೆದ ಡಿಸೆಂಬರ್​ನಲ್ಲಿ ಇದೇ ಸದನದಲ್ಲಿ ನಾನು 8 ಭರವಸೆಗಳನ್ನು ನೀಡಿದ್ದೆ. ಉತ್ತರ ಕರ್ನಾಟಕದ ಕಲಬುರಗಿ ಮತ್ತು ಬೆಳಗಾವಿ ವಿಭಾಗಗಳ 14 ಜಿಲ್ಲೆಗಳಿಗೆ ಸಂಬಂಧಿಸಿದಂತೆ 17,850 ಕೋಟಿ ರೂಪಾಯಿಗಳನ್ನು (ರೆಗ್ಯುಲರ್ ಅನುದಾನಗಳನ್ನು ಹೊರತುಪಡಿಸಿ) ನಂಜುಂಡಪ್ಪ ವರದಿಯ ಅಡಿಯಲ್ಲಿ ಖರ್ಚು ಮಾಡಲಾಗಿದೆ. ಎರಡೂ ಭಾಗದಲ್ಲಿರುವ ಅಸಮಾನತೆ ಹೋಗಲಾಡಿಸಲು ನಂಜುಂಡಪ್ಪ ಸಮಿತಿಯು 8 ವರ್ಷಗಳ ವಿಶೇಷ ಯೋಜನೆಯೊಂದನ್ನು ತಯಾರಿಸಿತ್ತು. ಅದರ ಪ್ರಕಾರ ಸರ್ಕಾರ ಒಟ್ಟು 31 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ವರದಿ ನೀಡಿತ್ತು. ಆದರೆ ಅದಕ್ಕಿಂತಲೂ ಹೆಚ್ಚಿನ ಅನುದಾನಗಳನ್ನು ನಿಡಲಾಗಿದೆ. ಅಭಿವೃದ್ಧಿ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿಲ್ಲ ಎಂದರು.
13 ಸಾವಿರ ಕೋಟಿ: ಕೆಕೆಆರ್​ಡಿಬಿಗೆ 2013-14ರಿಂದ ಇದುವರೆಗೆ 19,878 ಕೋಟಿ ರೂ.ಗಳನ್ನು ಬಜೆಟ್​ನಲ್ಲಿ ಒದಗಿಸಲಾಗಿದೆ. 13,229 ಕೊಟಿ ರೂ. ಬಿಡುಗಡೆ ಮಾಡಲಾಗಿದೆ. ಇದುವರೆಗೆ 11,500 ಕೋಟಿ ಖರ್ಚು ಮಾಡಲಾಗಿದೆ. ಮಂಡಳಿಯು ಬಿಡುಗಡೆಯಾದ ಅನುದಾನಕ್ಕೆ ಶೇ.85 ಆರ್ಥಿಕ ಪ್ರಗತಿ ಸಾಧಿಸಿದೆ. ಒಟ್ಟಾರೆ 35,885 ಕಾಮಗಾರಿಗಳು ಕೈಗೆತ್ತಿಕೊಂಡಿದ್ದು, 27,264 ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. 8,621 ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ. ಈ ಅಂಕಿಸಂಖ್ಯೆಗಳೇ ಪ್ರದೇಶದ ಅಭಿವೃದ್ಧಿಯನ್ನು ಸಾರಿ ಹೇಳುತ್ತಿವೆ ಎಂದು ಸಿಎಂ ಮಾಹಿತಿ ಹಂಚಿಕೊಂಡರು.

Share News

About BigTv News

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *