Breaking News

ಭೂಮಿಯಲ್ಲಿ ತೇವಾಂಶ ಹೆಚ್ಚಿದ ಕಾರಣ ಕಡಲೆಗೆ ಸಿಡಿರೋಗದ ಬಾಧೆ: ರೈತರಲ್ಲಿ ಆತಂಕ

ರೋಣ: ತಾಲ್ಲೂಕಿನ ವಿವಿಧೆಡೆ ಈಚೆಗೆ ಸುರಿದ ಮಳೆಯಿಂದಾಗಿ ಭೂಮಿಯ ತೇವಾಂಶ ಹೆಚ್ಚಿದ ಕಾರಣ ಇಲ್ಲಿನ ಪ್ರಮುಖ ಬೆಳೆಯಾದ ಕಡಲೆಗೆ ಸಿಡಿರೋಗದ ಬಾಧೆ ಎದುರಾಗಿದೆ.
ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆಗೆ ಕಳೆದ ಬಾರಿ ನಿರೀಕ್ಷಿತ ಬೆಲೆ ಸಿಗದ ಕಾರಣ ಈ ಬೆಳೆಗಳ ಬಿತ್ತನೆ ಕ್ಷೇತ್ರದ ಪ್ರಮಾಣ ತಾಲ್ಲೂಕಿನಲ್ಲಿ ಕಡಿಮೆಯಾಗಿದೆ.
ಕಳೆದ ಬಾರಿ ಕಡಲೆ ಬೆಳೆಯ ಉತ್ತಮ ಇಳುವರಿ ಸಿಕ್ಕಿದ್ದರಿಂದ ಈ ಬಾರಿಯೂ ಅದೇ ನಿರೀಕ್ಷೆಯೊಂದಿಗೆ ಕಡಲೆ ಬಿತ್ತನೆ ಮಾಡಲಾಗಿತ್ತು. ಆದರೆ, ಈಚೆಗೆ ಸುರಿದ ಮಳೆಯಿಂದಾಗಿ ಬಹುತೇಕ ರೈತರ ಜಮೀನುಗಳಲ್ಲಿ ಕಡಲೆ ಬೆಳೆಗೆ ಸಿಡಿರೋಗ ಆವರಿಸಿದೆ. ಇದರಿಂದ ನಿರೀಕ್ಷಿತ ಫಸಲು ಬಾರದೆ ರೈತರು ಕಂಗಾಲಾಗಿದ್ದಾರೆ.
ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಮಾಡಿದ್ದ ಬಿತ್ತನೆ ಬೀಜಗಳನ್ನೇ ಬಿತ್ತಿದ್ದ ರೈತರು, ಸರಿಯಾದ ರೀತಿಯಲ್ಲಿ ಬೀಜೋಪಚಾರ ಮಾಡಿದ್ದಾರೆ. ಕಡಲೆ ಬೆಳೆ ಫಸಲು ನೀಡುವ ಹಂತಕ್ಕೆ ಬಂದಿದ್ದು, ಸಿಡಿರೋಗ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ.
ಎಡೆ ಹೊಡೆಯುವುದು, ಔಷಧ ಸಿಂಪಡಣೆ ಸೇರಿದಂತೆ ಹಲವು ಕೆಲಸಗಳಿಗೆ ರೈತರು ಸಾಕಷ್ಟು ಖರ್ಚು ಮಾಡಿದ್ದಾರೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಬೆಳೆ ಕೈಸೇರದೆ, ಹಾನಿ ಸಂಭವಿಸುವ ಆತಂಕ ಅವರದ್ದಾಗಿದೆ.
ಕಳೆದ ಎರಡ್ಮೂರು ವರ್ಷಗಳಿಂದ ಕಡಲೆಗೆ ಫಸಲ್ ಬಿಮಾ ಯೋಜನೆಯಡಿ ಪರಿಹಾರವೂ ರೈತರಿಗೆ ಸಿಕ್ಕಿಲ್ಲ. ಈ ಬಾರಿಯಾದರೂ ವಿಮಾ ಪರಿಹಾರದ ಜತೆಗೆ ಸರ್ಕಾರ ಅಗತ್ಯ ಪರಿಹಾರವನ್ನು ನೀಡಬೇಕು ಎಂಬುದು ರೈತರ ಆಗ್ರಹವಾಗಿದೆ.
ಕಾಳು ಕಟ್ಟುವ ಹಂತದಲ್ಲಿರುವ ಕಡಲೆ ಬೆಳೆತಾಲ್ಲೂಕಿನ ಪ್ರಮುಖ ಬೆಳೆ ಕಡಲೆ ಬೀಜೋಪಚಾರ ಮಾಡಿದರೂ ವ್ಯಾಪಿಸಿದ ರೋಗ ಎರಡ್ಮೂರು ವರ್ಷದಿಂದ ಬಾರದ ವಿಮೆ ಪರಿಹಾರ’ರೋಣ ಭಾಗದ ಹಿಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಕಡಲೆಗೆ ಈ ಬಾರಿ ಸಿಡಿರೋಗ ಬಾಧಿಸುತ್ತಿದೆ. ಅಧಿಕಾರಿಗಳು ತಕ್ಷಣವೇ ಸಮೀಕ್ಷೆ ಕೈಗೊಂಡು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ರೈತರಿಗೆ ಸೂಕ್ತ ಪರಿಹಾರ ದೊರೆಯುವಂತೆ ಮಾಡಬೇಕು. ಸರ್ಕಾರವು ಕೂಡ ರೈತರ ನೆರವಿಗೆ ಧಾವಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *