ಬೆಂಗಳೂರು: ನಿವೃತ್ತ ಐಎಎಸ್ ಅಧಿಕಾರಿ ಡಾ| ಅಶೋಕ ಎಂ. ದಳವಾಯಿ ಅವರನ್ನು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ನೇಮಿಸಿ ರಾಜ್ಯ ಸರಕಾರ ಆದೇಶಿಸಿದೆ. ಆಯೋಗದ ಅಧ್ಯಕ್ಷ ಹುದ್ದೆ ತೆರವಾದಾಗಿನಿಂದಲೂ ಕೃಷಿ ಸಚಿವರೇ ಅಧ್ಯಕ್ಷ ಸ್ಥಾನದಲ್ಲಿ ಇದ್ದರು.
ಬಳ್ಳಾರಿಯ ಎಸ್.ಆರ್.ಗಾದಿಲಿಂಗನಗೌಡ ಹಾಗೂ ಕೊಪ್ಪಳದ ಡಿ.ಎಚ್. ಪೂಜಾರ ಅವರನ್ನು ಆಯೋಗದ ಸದಸ್ಯರನ್ನಾಗಿ ನೇಮಿಸಿದ್ದು, ಕೃಷಿ ಆಯುಕ್ತಾಲಯದ (ಬೆಳೆ ಅಭಿವೃದ್ಧಿ ಮತ್ತು ಯೋಜನೆ) ಹೆಚ್ಚುವರಿ ನಿರ್ದೇಶಕರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. 2026ರ ಜೂ. 25ರ ವರೆಗೆ ಅವಧಿ ಇರಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

