Breaking News

ಸೈನೆಡ್,! ಹಸಿರು ಬಟಾಣಿ.

ಇದೀಗ ಮಾರುಕಟ್ಟೆಯಲ್ಲಿ ಆಹಾರದ ಬಗ್ಗೆ ಹೆಚ್ಚು ಗಮನವಹಿಸುತ್ತಿರುವ ಸಾರ್ವಜನಿಕರು ಕೆಲವು ಆಹಾರ ಪದಾರ್ಥಗಳ ಮೇಲೆ ರಾಸಾಯನಿಕ ವಸ್ತುಗಳನ್ನು ಉಪಯೋಗಿಸುವ ಸುದ್ದಿ ಸುದ್ದಿ ಕೇಳಿ ಬರದಾಗಿರುವ ಸಮಯದ ನಡುವೆ ಇನ್ನೊಂದು ವಿಶೇಷ ಭಯಾನಕ ಸುದ್ದಿ ಜಲತಾಣದಲ್ಲಿ ಹರಿದಾಡುತ್ತಿದೆ.
ಸಿನಿಮಾಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇತರೆ ಕಾರ್ಯಕ್ರಮಗಳಲ್ಲಿ ಜನರು ಇಷ್ಟಪಟ್ಟು ಸವಿಯುವ ತಿಂಡಿಯಂದರೆ ಅದು ಕರಿದ ಬಟಾಣಿ
ಇದೀಗ ಕರಿದ ಬಟಾಣಿಯೂ ತಿನ್ನಲು ಯೋಗ್ಯವಲ್ಲವೆಂದು ವೈದ್ಯರು ಪರೀಕ್ಷಿಸುವ ಮೂಲಕ ಕರೆದ ಬಟಾಣಿಯೂ ಆರೋಗ್ಯಕ್ಕೆ ಸೂಕ್ತ ವಲ್ಲವೆಂದು ತಿಳಿಸಿದ್ದಾರೆ. ಆಹಾರಗಳಲ್ಲಿ ಕೃತಕ ಬಣ್ಣಗಳನ್ನು ಉಪಯೋಗಿಸುತ್ತಿದ್ದು ಇದು ಮನುಷ್ಯನ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುವುದಾಗಿ ವೈದ್ಯರ ತಪಾಸಣೆಯಲ್ಲಿ ಕಂಡು ಬಂದಿದೆ. ಇದೀಗ ಬೆಂಗಳೂರಿನಲ್ಲಿ ಸುರಕ್ಷತೆ ಮತ್ತು ಔಷಧ ಗುಣಮಟ್ಟ ಇಲಾಖೆಯ ಅಧಿಕಾರಿಗಳು ಕರೆದ ಬಟಾಣಿಯ 96 ಮಾದರಿಯನ್ನು ತಪಾಸನೆಗೆ ಒಳಪಡಿಸಿತ್ತು ಅದರಲ್ಲಿ 64 ಅಸುರಕ್ಷಿತ ಅಂಶಗಳು ಕಂಡು ಬಂದಿದ್ದು ಹುರಿದ ಹಸಿರು ಬಟಾಣಿಗಳ ಮಾದರಿಗಳಲ್ಲಿ ನಿಷೇಧಿತ ಕೃತಕ ಬಣ್ಣ ಟಾರ್ಟ್ರಾಜಿನ್ ಪತ್ತೆಯಾಗಿದೆ. ಕರಿದ ಹಸಿರು ಹಾಗೂ ಕೆಂಪು ಬಟಾಣಿಗಳು ತಿನ್ನಲು ಯೋಗ್ಯ ವಲ್ಲವೆಂದು ತಿಳಿಸಿದೆ. ಇಂದು ಬಹಳ ಪ್ರಮಾಣದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್​ಗೆ ಕೂಡ ಇದೇ ವಿಷ ಪ್ರಮುಖ ಅಂಶ ಎನ್ನುವುದು ತಿಳಿದಿದೆ. ರಾಜ್ಯ ಸರ್ಕಾರ, ಜನರ ಆರೋಗ್ಯದ ದೃಷ್ಟಿಯಿಂದ ಗೋಬಿಗೆ ಬಳಸುವ ಬಣ್ಣಕ್ಕೆ ನಿಷೇಧ ಹೇರಿದೆ. ಇಷ್ಟೇ ಅಲ್ಲದೇ, ಇಡ್ಲಿ ಮತ್ತು ಹೋಳಿಗೆ ಮಾಡುವ ಕೆಲವು ಹೋಟೆಲ್​ಗಳಲ್ಲಿ ಪ್ಲಾಸ್ಟಿಕ್‌ ಬಳಸುವುದು ಇದು ಕೂಡ ವಿಷಕಾರಿ ಅಂಶ ಹೊಂದಿದೆ ಎನ್ನುವ ಮಾಹಿತಿ ಬಂದಿದೆ. ಅಷ್ಟೇ ಅಲ್ಲದೇ, ಸಕ್ಕರೆ ಉಪಯೋಗ ಹಾನಿಕರ ಎನ್ನುವ ಕಾರಣಕ್ಕೆ ಬೆಲ್ಲಕ್ಕೆ ಡಿಮಾಂಡ್​ ಜಾಸ್ತಿಯಾಗಿತ್ತು ಆದರೆ ಇದೀಗ ಬೆಲ್ಲದಲ್ಲಿ ಕೂಡ ರಾಸಾಯನಿಕದ ಬಳಕೆ ಆಗುತ್ತಿದೆ. ಇವೆಲ್ಲವೂ ಬಹಳ ಹಿಂದಿನಿಂದಲೂ ನಡೆದು ಬಂದಿದೆ. ಆದರೆ ಇದೀಗ ಅವು ಬೆಳಕಿಗೆ ಬರುತ್ತಿವೆಯಷ್ಟೇ

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *