ಯಾದಗಿರಿ: ಮಾವಿನಮಟ್ಟಿ ಗ್ರಾಮನಲ್ಲಿ ಕೇವಲ 2 ಎಕರೆ ಜಮೀನಿನ ವಿವಾದವು ಭೀಕರ ಹಿಂಸಾಚಾರಕ್ಕೆ ತಿರುಗಿದೆ. ಮಲ್ಲಪ್ಪ ಮತ್ತು ಹನುಮಂತರಾಯ ಕುಟುಂಬಗಳ ನಡುವೆ ಕಳೆದ 4 ವರ್ಷಗಳಿಂದ ಜಮೀನಿನ ದಾರಿ ವಿಚಾರಕ್ಕೆ ಸಂಬಂಧಿಸಿದ ಜಗಳ ನಡೆಯುತ್ತಿತ್ತು. ಇದೇ ವೈಷಮ್ಯ ಈಗ ಕೊಲೆಯವರೆಗೆ ತಲುಪಿದೆ. ಆರೋಪಿಗಳ ಗುಂಪು 27 ವರ್ಷದ ಪರಮೇಶ್ವರ ಎಂಬ ಯುವಕನ ಮೇಲೆ ತಲ್ವಾರ್ ಮತ್ತು ದೊಣ್ಣೆಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ರೇವಣಸಿದ್ದನಿಗೂ ಗಂಭೀರ ಗಾಯಗಳಾಗಿವೆ. ಘಟನೆಯ ಬಳಿಕ ಕೆಂಭಾವಿ ಪೊಲೀಸ್ ಠಾಣೆ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಅಣ್ಣನ ಸಾವಿನಿಂದ ಕೆರಳಿದ ರೇವಣಸಿದ್ದ, ಪ್ರತೀಕಾರವಾಗಿ ಆರೋಪಿಗಳ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಅಗ್ನಿಕಾಂಡದಲ್ಲಿ ಮನೆ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿವೆ. ಈ ಪ್ರಕರಣದಲ್ಲಿ ಪ್ರತೀಕಾರದ ಹಿಂಸಾಚಾರವೂ ಸೇರಿಕೊಂಡಿರುವುದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಹಾಗೂ ಪೊಲೀಸರು ಹೆಚ್ಚಿನ ಭದ್ರತೆ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

