ಮಹಾರಾಷ್ಟ್ರದ ಪಿಂಪಲ್‍ಗಾಂವ್‍ನಲ್ಲಿ ಭಯಾನಕವಾದ ಘಟನೆಯೊಂದು ನಡೆದಿದ್ದು, ಯವತ್ಮಾಲ್ ಪಟ್ಟಣದ ರಸ್ತೆಯ ಮಧ್ಯದಲ್ಲಿ ಹಾಡಹಗಲೇ ಸಹೋದರನೊಬ್ಬ ತನ್ನ ಹಿರಿಯ ಸಹೋದರನನ್ನು ಕಬ್ಬಿಣದ ರಾಡ್‍ನಿಂದ ಹೊಡೆದು ಕ್ರೂರವಾಗಿ ಕೊಂದಿದ್ದಾನೆ. ಆದರೆ ರಸ್ತೆಯಲ್ಲಿ ಹೋಗುತ್ತಿದ್ದವರು ಯಾರೂ ಕೂಡ ಈ ಕೃತ್ಯವನ್ನು ತಡೆಯಲು ಮುಂದೆ ಬರಲಿಲ್ಲವಂತೆ. ವರದಿ ಪ್ರಕಾರ ಮೃತನನ್ನು 35 ವರ್ಷದ ಪ್ರಮೋದ್ ಪೆಂಡೋರ್ ಹಾಗೂ ಆರೋಪಿಯನ್ನು 34 ವರ್ಷದ ಕವಿವರ್ ಎಂದು ಗುರುತಿಸಲಾಗಿದೆ. ಘಟನೆ ಬೆಳಕಿಗೆ ಬಂದ ನಂತರ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎನ್ನಲಾಗಿದೆ. ಮೃತನು 2017 ರಲ್ಲಿ ಅಂತರ್ಜಾತೀಯ ಪ್ರೇಮ ವಿವಾಹವಾಗಿ ತನ್ನ ಕುಟುಂಬದಿಂದ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನಂತೆ. ಆದರೆ ಇತ್ತೀಚೆಗೆ ಅವನು ತನ್ನ ಹೆತ್ತವರನ್ನು ಭೇಟಿಯಾಗಲು ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

