Breaking News
Oplus_131072

ಗೆಳೆಯನ ಶ್ರೀಮಂತಿಕೆಯ ಬಗ್ಗೆ ಹೊಟ್ಟೆಯುರಿ ಇಂದ ವಿಷ ಉಣಿಸಿದ ಸ್ನೇಹಿತ!!

ಇತ್ತೀಚೆಗಷ್ಟೇ ವೇದಾಂತ್ ಮನೆಯವರು ಆಧುನಿಕ ಸೌಕರ್ಯಗಳಿರುವ ಎರಡಂತಸ್ಥಿನ ಮನೆಯನ್ನು ಕಟ್ಟಿಸಿದ್ದರು. ಆದರೆ ಆರೋಪಿ ಮಂಥನ್‌ ಸಣ್ಣ ಮನೆಯಲ್ಲಿ ವಾಸ ಮಾಡುತ್ತಿದ್ದ ಗೆಳೆಯನ ಶ್ರೀಮಂತಿಕೆಯ ಬಗ್ಗೆ ಮಂಥನ್‌ಗೆ ಹೊಟ್ಟೆಯುರಿ ಇತ್ತು. ಮಂಥನ್ ವೇದಾಂತ್‌ನನ್ನು ಸಮೀಪದ ಪಾನ್‌ ಶಾಪ್‌ಗೆ ಬರುವಂತೆ ಕರೆದಿದ್ದಾನೆ. ಅಲ್ಲಿ ಇಬ್ಬರು ತಂಪು ಪಾನೀಯ ಸೇವಿಸಿದ್ದಾರೆ. ಆದರೆ ಇದೇ ವೇಳೆ ವೇದಾಂತ್‌ಗೆ ತಿಳಿಯದಂತೆ ಆರೋಪಿ ಮಂಥನ್‌ ವೇದಾಂತ್‌ನ ಜ್ಯೂಸ್ ಗ್ಲಾಸ್‌ಗೆ ಜಿರಳೆ ನಿವಾರಕ ಜೆಲ್‌ನ್ನು ಹಾಕಿದ್ದಾನೆ. ಈ ಜ್ಯೂಸ್ ಕುಡಿದ ನಂತರ ವೇದಾಂತ್ ಮನೆಗೆ ಮರಳಿದ್ದು, ಆತನಿಗೆ ತಲೆ ತಿರುಗಲು ಶುರುವಾಗಿದೆ. ಅಲ್ಲದೇ ಸ್ವಲ್ಪ ಹೊತ್ತಿನಲ್ಲೇ ಆತನ ಸ್ಥಿತಿ ಗಂಭೀರವಾಗಿದೆ. ಕೂಡಲೇ ಆತನನ್ನು ಮನೆಯವರು ಸಮೀಪದ ಸಕ್ಕರದಾರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಆತನಿಗೆ ವಿಷಪ್ರಾಶನವಾದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಕೂಡಲೇ ಚಿಕಿತ್ಸೆ ಆರಂಭಿಸಿದ್ದಾರೆ. ಆದರೆ ವೇದಾಂತ್ ಮತ್ತೆ ಮೇಲೆದಿಲ್ಲ, ಪ್ರಜ್ಞಾಶೂನ್ಯನಾಗಿದ್ದ ವೇದಾಂತ್ ಮೃತಪಟ್ಟಿದ್ದಾನೆ.

Share News

About BigTv News

Check Also

ಹಂಪಿ ಎಕ್ಸ್‌ಪ್ರೆಸ್ ರೈಲಿಗೆ ಆಕಸ್ಮಿಕ ಬೆಂಕಿ

ಬಳ್ಳಾರಿ : ಹಂಪಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಟು ಆತಂಕ ಸೃಷ್ಟಿಯಾದರೂ, ಅನಾಹುತ ಸಂಭವಿಸದೇ ಪ್ರಯಾಣಿಕರು ಪಾರಾದ …

Leave a Reply

Your email address will not be published. Required fields are marked *