Breaking News

ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಪತ್ನಿ!!

ವಿವಾಹಿತ ಮಹಿಳೆ ಹಾಗೂ ಆತನ ಪ್ರಿಯಕರ ಇಬ್ಬರು ಸೇರಿ ಮಹಿಳೆಯ ಪತಿಯನ್ನು ಉಸಿರುಕಟ್ಟಿಸಿ ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ಹರ್ಯಾಣದ ಹಿಸ್ಸಾರ್‌ನಲ್ಲಿ ನಡೆದಿದೆ.ರೀಲ್ಸ್‌ ಮಾಡಿ ಮಾಡಿ ರವೀನಾ ಹಾಗೂ ಸುರೇಶ್‌ ಮಧ್ಯೆ ಅಗತ್ಯಕ್ಕಿಂತ ಹೆಚ್ಚೇ ಬಾಂಧವ್ಯ ಬೆಳೆದಿದೆ. ಕಳೆದ ಮಾರ್ಚ್‌ 25ರಂದು ರವೀನಾಳ ಪತಿ ಪ್ರವೀಣ್‌ (35), ಇವರಿಬ್ಬರೂ ಅಕ್ರಮ ಸಂಬಂಧ ಇರುವುದನ್ನು ಪತ್ತೆಹಚ್ಚಿದ್ದ. ಇದರಿಂದ ಗಂಡ ಹೆಂಡತಿ ನಡುವಣ ಜಗಳ ತಾರಕಕ್ಕೇರಿದೆ. ಇದಾದ ನಂತರ ಇಬ್ಬರೂ ಸೇರಿ 35 ವರ್ಷದ ಪ್ರವೀಣ್‌ನನ್ನು ಶಾಲಿನಿಂದ ಉಸಿರುಕಟ್ಟಿಸಿ ಹತ್ಯೆ ಮಾಡಿದ್ದಾರೆ. ಇತ್ತ ಪ್ರವೀಣ್ ಮನೆಯವರು ರವೀನಾ ಬಳಿ ಪತಿಯ ಬಗ್ಗೆ ಕೇಳಿದಾಗ ಆಕೆ ತನಗೆ ಏನೂ ಗೊತ್ತಿಲ್ಲ ಎಂಬುವಂತೆ ನಾಟಕವಾಡಿದ್ದಾಳೆ.ನಂತರ ಪೊಲೀಸರು ರವೀನಾ ಮತ್ತು ಸುರೇಶ್ ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

Share News

About BigTv News

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *