ಇ-ಮೇಲ್ ಹ್ಯಾಕ್ ಮಾಡಿರುವ ದುಷ್ಕರ್ಮಿಗಳು, ಗೂಗಲ್ ಲಿಂಕ್ ಬಳಸಿಕೊಂಡು ದೂರುದಾರೆಯ ವೈಯಕ್ತಿಕ ಫೋಟೋಗಳನ್ನು ತೆಗೆದುಕೊಂಡು ಅಶ್ಲೀಲವಾಗಿ ಮಾರ್ಫ್ ಮಾಡಿ ವಿಡಿಯೋ ಸೃಷ್ಟಿಸಿದ್ದಾರೆ. ಬಳಿಕ ಆ ವಿಡಿಯೋ ಹಾಗೂ ಫೋಟೊಗಳನ್ನು ದೂರುದಾರೆಯ ಅಕ್ಕನ ಗಂಡನಿಗೆ ಕಳುಹಿಸಿದ್ದಾರೆ. 2.50 ಲಕ್ಷ ರು. ಹಣಕ್ಕೆ ಬೇಡಿಕೆ ಇರಿಸಿದ್ದಾರೆ. ಒಂದು ವೇಳೆ ಹಣ ಕೊಡದಿದ್ದಲ್ಲಿ ಈ ವಿಡಿಯೋ ಹಾಗೂ ಫೋಟೋಗಳನ್ನು ಪೋರ್ನ್ ವೆಬ್‌ಸೈಟ್‌ಗೆ ಅಪ್ಲೌಡ್ ಮಾಡುವುದಾಗಿ ಸಂದೇಶ ಕಳುಹಿಸಿ ದೂರುದಾರೆಯನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾರೆ.ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news

