Breaking News
Oplus_131072

ಕುಡಿದ ಮತ್ತಿನಲ್ಲಿಮಹಿಳೆ ಮೇಲೆ ಥಿನ್ನರ್‌ ಎರಚಿ ಬೆಂಕಿ ಹಚ್ಚಿದ ಕುಡುಕ!!

ಸಂತ್ರಸ್ತೆ ಹಾಗೂ ಆರೋಪಿ ಇಬ್ಬರೂ ಒಂದೇ ಕಟ್ಟಡದಲ್ಲಿ ಅಕ್ಕಪಕ್ಕದ ಅಂಗಡಿಯವರಾಗಿದ್ದಾರೆ. ಮಹಿಳೆ ರಮಿತಾ ದಿನಸಿ ಅಂಗಡಿ ಇಟ್ಟುಕೊಂಡಿದ್ದರೆ, ಆರೋಪಿ ಸಮೀಪದಲ್ಲೇ ಫರ್ನಿಚರ್ ಅಂಗಡಿ ಹಾಕಿಕೊಂಡಿದ್ದ. ಕುಡಿತದ ಚಟಕ್ಕೆ ದಾಸನಾಗಿದ್ದ ರಾಮಾಮೃತಮ್‌ ಹಗಲಿನಲ್ಲಿಯೇ ಕುಡಿದು ಬಂದು ಪಕ್ಕದ ಅಂಗಡಿಯವರಾದ ರಮಿತಾ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡಿದ್ದ ರಮಿತಾ ಈ ವಿಚಾರವನ್ನು ಕಟ್ಟಡದ ಮಾಲೀಕರಿಗೆ ತಿಳಿಸಿದ್ದರು. ಹೀಗಾಗಿ ಕಟ್ಟಡ ಮಾಲೀಕರು ರಾಮಾಮೃತಮ್‌ಗೆ ತಮ್ಮ ಅಂಗಡಿಯನ್ನು ಬೇರೆಡೆ ಸ್ಥಳಾಂತರಿಸಿ ತಮ್ಮ ಕಟ್ಟಡ ಖಾಲಿ ಮಾಡುವಂತೆ ಸೂಚಿಸಿದ್ದರು. ಇದರಿಂದ ಕುಪಿತಗೊಂಡ ರಾಮಾಮೃತಮ್ ಕುಡಿದು ಬಂದು ರಮಿತಾ ಮೇಲೆ ಸೇಡು ತೀರಿಸಿಕೊಳ್ಳಲು ಥಿನ್ನರ್ ಸುರಿದು ಬೆಂಕಿ ಕಡ್ಡಿ ಗಿರಿ ಎಸೆದು ಅಲ್ಲಿಂದ ಓಡಿದ್ದಾನೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *