Breaking News

ತುಷ್ಟೀಕರಣ ರಾಜಕಾರಣಕ್ಕೆ ಮತಾಂತರ ನಿಷೇಧ ಕಾಯ್ದೆ ಜಾರಿ ವಾಪಸ್- ಮಹೇಶ ಟೆಂಗಿನಕಾಯಿ

ಹುಬ್ಬಳ್ಳಿ: ರಾಜ್ಯ ಸರ್ಕಾರ ಅಲ್ಪಸಂಖ್ಯಾತರನ್ನ ಒಲೈಸಿಕೊಳ್ಳಲು ತುಷ್ಟೀಕರಣ ರಾಜಕಾರಣಕ್ಕೆ ಮತಾಂತರ ನಿಷೇಧ ಕಾಯ್ದೆ ಜಾರಿ ವಾಪಸ್ ಪಡೆಯಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಗಂಭೀರ ಸ್ವರೂಪದ ಆರೋಪ ಮಾಡಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,

ಮತಾಂತರ ಕಾಯ್ದೆ ಜಾರಿಗೆ ಸ್ವತಃ ಹಿಂದೆ ಅವರೇ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯಾನವರೇ ಪ್ರಸ್ತಾಪ ಮಾಡಿದ್ದರು. ಈಗ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವ ಅಗತ್ಯವಿರಲಿಲ್ಲ. ಮತಾಂತರ ಪ್ರಕ್ರಿಯೆ ಹೆಚ್ಚಾಗಲು ಕಾಂಗ್ರೆಸ್ ಮುಂದಾಗತಾ ಇದೆ ಎಂದ ಅವರು ಮತಾಂತರ ಹೆಚ್ಚಿಗೆ ಮಾಡುವ ಕೆಲಸಕ್ಕೆ ಸರ್ಕಾರ ಕೈ ಹಾಕುತಿದೆ ಎಂದು ಸಹ ಕಿಡಿ ಕಾರಿದರು. ನಾವು ಹಿಂದಿನ ಅನೇಕ ಘಟಾನವಳಿಗಳನ್ನ ನೋಡಿದಾಗ ಗೊತ್ತಾಗುತ್ತದೆ ಕಾಂಗ್ರೆಸ್ಜಾತಿ ಜಾತಿ ಗಳ‌ ನಡುವೆ ವಿಷ ಬೀಜವನ್ನ ಬಿತ್ತುವ ಕೆಲಸ ಮಾಡಿತ್ತು ಈಗ ಅದರ ಮುಂದುವರಿದ ಭಾಗವಾಗ ಈಗ ಮತಾಂತರ ನಿಷೇಧ ಕಾಯ್ದೆ ವಾಪಾಸ್ ಪಡೆಯಲಾಗುತ್ತಿದೆ ಎಂದರು.

ಸಿದ್ದರಾಮಯ್ಯಾನವರೇ ಬಿಲ್ ಗೆ ಸಹಿ ಮಾಡಿದ್ದರು
ಸಿದ್ದರಾಮಯ್ಯಾನವರು ಮುಖ್ಯಮಂತ್ರಿ ಆಗಿದ್ದ ವೇಳೆ ಸ್ವತಃ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ
ಅವರೇ ಈ ಬಿಲ್ ಗೆ ಸಹಿ ಹಾಕಿದ್ದರು ಎಂದ ಅವರು ಇನ್ನು ಅವರೇ ಅಂದಿನ ಮುಖ್ಯಮಂತ್ರಿ ಸಹ ಆಗಿದ್ದರು ಈಗ ಬಿಜೆಪಿಯವರು ಅಂದರೆ ನಾವು ಪಾಸ್ ಮಾಡಿದ ಬಿಲ್ ವಾಪಾಸ್ ಪಡೆಯುತಿದ್ದಾರೆ.

ಈಗ ಮತಾಂತರ ನಿಷೇಧ ಕಾಯ್ದೆ ವಾಪಾಸ್ ಪಡೆಯಲಾಗಿದೆ ಇದು ಸರಿಯಲ್ಲ. ಭಾರತೀಯ ಜನತಾ ಪಕ್ಷಅಂದರೆ ನಮ್ಮ ಸರ್ಕಾರ ಇದ್ದಾಗ ಈ ಕಾಯ್ದೆ ಜಾರಿ ಮಾಡಲಾಯಿತು ಅಂದಿನ ಕಾನೂನು ಸಚಿವರಾದ ಮಾಧು ಸ್ವಾಮಿ ಅವರು ಕ್ಯಾಬಿನೆಟ್ ಗೆ ತಂದು ಪಾಸ್ ಮಾಡಿದಾಗ ಸಿದ್ದರಾಮಯ್ಯಾನವರು ವಿರೋಧ ವ್ಯಕ್ತಪಡಿಸಿದ್ದರು‌. ಅಂದು ಈ ಬಗ್ಗೆ ಕಾನೂನು ಸಚಿವರಾಗಿದ್ದ ಮಾಧುಸ್ವಾಮಿ ಸ್ಪಷ್ಟಪಡಿಸಿದ್ದರು. ಹಿಂದಿನ ಬಿಲ್ ಇದಾಗಿದ್ದು ನಾವು ಪಾಸ್ ಮಾಡಿದ್ದೇವೆ ಅಷ್ಟೇ ಅಂತಾ ಇನ್ನು ಇದರ ಬಗ್ಗೆ ಅಂದಿನ ಕಾನೂನು ಸಚಿವರಾಗಿದ್ದ ಮಾಧುಸ್ವಾಮಿ ಅಂದಿನ ಕ್ಯಾಬಿನೆಟ್ ಸಭೆ ನಂತರ ಸ್ಪಷ್ಟಪಡಿಸಿದರು.

ಅಷ್ಟೇ ಅಲ್ಲಾ ಅಂದಿನ ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಹಿಂದಿನ ನಡವಳಿಯನ್ನ ಸಹ ಒದಿ ಹೇಳಿದ್ದರು‌ ಈ ಕಾಯ್ದೆ ಜಾರಿ ಸಂದರ್ಭದಲ್ಲಿ ಚರ್ಚೆ ನಡೆಸಲಾಯಿತು ಎಂದರು. ಚರ್ಚೆ ವೇಳೆ ಸ್ಪೀಕರ್ ಕಾಗೇರಿ ಅವರು ಹಿಂದಿನ ನಡಾವಳಿ ಓದಿ ಸಹ ಹೇಳಿದಾಗ ಸುಮ್ಮನೆ ಇದ್ದರು.

ಹಿಂದಿನ ಅಂದರೆ‌ ಸಿದ್ದರಾಮಯ್ಯಾನವರು ಸಿಎಂ ಆದ ವೇಳೆ ಕ್ಯಾಬಿನೆಟ್ ತೆಗೆದುಕೊಂಡ ನಿರ್ಣಯವನ್ನು ಕಾಗೇರಿ ಅವರು ಓದಿ ಹೇಳಿದ್ದು ಗೊತ್ತು ಈ ಕುರಿತು
ಸಿದ್ದರಾಮಯ್ಯಾ ನವರು ಸಹ ಒಪ್ಪಿಕೊಂಡಿದ್ದರು. ಆದರೆ ಈಗ ಯಾಕೆ ಮತಾಂತರ ನಿಷೇಧ ಕಾಯ್ದೆ ವಾಪಾಸ್ ಪಡೆಯುತಿದ್ದಾರೆ ಗೊತ್ತಾಗತಾ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದರು

Share News

About BigTv News

Check Also

ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಅರಾಜಕತೆ! ಅಪ್ರಾಪ್ತರ ಕೈಗೆ ಬೈಕ್, ರಸ್ತೆಯಲ್ಲಿ ಜೀವದ ಜೊತೆ ಚೆಲ್ಲಾಟ!

👆News Audio ಹೆಲ್ಮೆಟ್ ಇಲ್ಲ, ನಂಬರ್ ಪ್ಲೇಟ್ ಇಲ್ಲ… ಟ್ರಾಫಿಕ್ ಪೊಲೀಸರ ಕಣ್ಣೆದುರೇ ನಿಯಮಗಳ ಉಲ್ಲಂಘನೆ! ಸಾರ್ವಜನಿಕರ ಜೀವಕ್ಕೆ ಹೊಣೆ …

Leave a Reply

Your email address will not be published. Required fields are marked *