ಸಣ್ಣ ಪುಟ್ಟ ವಿಚಾರಕ್ಕೆ ಕೋಪ ಮಾಡಿಕೊಳ್ಳುವ ಸ್ವಭಾವದವರಾಗಿದ್ದ ಅವರು ಮಾನಸಿಕ ಖನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಅಜ್ಜಿ ತಾಯಿಗೆ ಎಳನೀರು ಕೊಟ್ಟು ಬರುವಂತೆ ಹೇಳಿದಾಗ ಕೋಪಿಸಿಕೊಂಡು ಸೈಕಲ್ ತೆಗೆದುಕೊಂಡು ಹೋದ ಮೊಮ್ಮಗ ಮರಳಿ ಮನೆಗೆ ಬಂದಿರಲಿಲ್ಲ.ಮೃತದೇಹ ವಾರಾಹಿ ಹೊಳೆಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರ ಅಜ್ಜ ಗಣಪತಿ ನೀಡಿದ ದೂರಿನಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಳ್ಕೂರು ಗ್ರಾಮದ ಸ್ವಸ್ತಿಕ್ (21) ಅವರು ಬಳ್ಕೂರು ಕಳುವಿನಬಾಗಿಲು ವಾರಾಹಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

