ಕಳೆದ 10 ವರ್ಷಗಳಿಂದ ತನ್ನ ಬಳಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ರಾಜೇಶ್ ಎಂಬಾತ, ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು ಮಾಲೀಕ ತೋಟ ಪ್ರಸಾದ್ ಅವರ 1.51 ಕೋಟಿ ರೂಪಾಯಿಯನ್ನು ಎಗರಿಸಿದ್ದಾನೆ.ಬ್ಯಾಂಕ್‌ನಲ್ಲಿ ಠೇವಣಿ ಮಾಡಲು 1.51 ಕೋಟಿ ರೂ. ನಗದು ಡ್ರೈವರ್ ರಾಜೇಶ್ ಗೆ ನೀಡಿದ್ದರು. ಈ ಹಣವನ್ನು ನೀಡಿದ ಬಳಿಕ, ರಾಜೇಶ್ ತನ್ನ ಕಾರನ್ನು ಪಾರ್ಕ್ ಮಾಡುವ ನೆಪದಲ್ಲಿ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದನು. ಆಂಧ್ರಪ್ರದೇಶದ ಗುಂಟೂರಿನ ಮೂಲ ಹೊಂದಿರುವ ರಾಜೇಶ್, ಪರಾರಿಯಾದ ಬಳಿಕ ಹಣವನ್ನು ತನ್ನ ಮನೆಯಲ್ಲಿಟ್ಟುಕೊಂಡು ಸುಮಾರು ₹2.5 ಲಕ್ಷ ಖರ್ಚು ಮಾಡಿಕೊಂಡಿದ್ದಾನೆ. ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿ, ಆತನನ್ನು ಪತ್ತೆಹಚ್ಚಿ ಬಂಧಿಸಿ ₹1.48 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

