ಅಣ್ಣ- ತಮ್ಮಂದಿರೊಂದಿಗೆ ಸ್ನೇಹಿತರು ಈಜಲು ಹೋಗಿದ್ದ ಸಂದರ್ಭ ಯುವಕನೋರ್ವ ಈಜು ಬಾರದೆ ಮುಳುಗಿ ಸಾವನ್ನಪ್ಪಿರುವ ಘಟನೆ ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಈಜಲು ಹೋಗಿ ಮುಳುಗಿದ್ದ ಹೇಮಂತನನ್ನು ಹುಡುಕಲು ಎಷ್ಟೇ ಪ್ರಯತ್ನಿಸಿದರೂ ಸುಳಿವು ಸಿಗದೆ ನಂತರ ಸಾರ್ವಜನಿಕರ ಸಹಕಾರದಿಂದ ಹೊರ ತೆಗೆದರಾದರೂ ಅಷ್ಟರಲ್ಲಾಗಲೇ ಉಸಿರು ಕಟ್ಟಿ ಸಾವಿಗೀಡಾಗಿದ್ದ ಎನ್ನಲಾಗಿದೆ.ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಅನಿಲ್ ಹಾಗೂ ಪಿ ಎಸ್‌ಐ ಅಭಿಷೇಕ್ ಮತ್ತು ಯೋಗೇಶ್ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
