ಟೀಮ್ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ನಂತರ ಮೊದಲ ಬಾರಿಗೆ ಉತ್ತರ ಪ್ರದೇಶದ ವೃಂದಾವನಕ್ಕೆ ಭೇಟಿ ನೀಡಿದ್ದು. ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಅವರು ವೃಂದಾವನದ ಸ್ವಾಮಿ ಪ್ರೇಮಾನಂದ್ ಮಹರಾಜ್ರನ್ನು ಭೇಟಿಯಾಗಿ ಆರ್ಶೀವಾದ ಪಡೆದಿದ್ದಾರೆ.ಈ ದಂಪತಿಗಳು ಆಧ್ಯಾತ್ಮಿಕ ನಾಯಕನನ್ನು ಭೇಟಿ ಮಾಡುತ್ತಿರುವುದು ಇದೇ ಮೊದಲಲ್ಲ. ಅವರು ಅವರನ್ನು ಹಲವು ಬಾರಿ ಭೇಟಿ ಮಾಡಿದ್ದಾರೆ ಮತ್ತು ನಿಯಮಿತವಾಗಿ ಅವರ ಸತ್ಸಂಗಗಳಿಗೆ ಹಾಜರಾಗಿದ್ದಾರೆ. ಆಗಾಗ್ಗೆ ತಮ್ಮ ಮಕ್ಕಳಾದ ವಾಮಿಕ ಮತ್ತು ಅಕಾಯ್ ಅವರನ್ನು ಕರೆತರುತ್ತಾರೆ. ಕಳೆದ ಆಸ್ಟ್ರೇಲಿಯಾ ಸೀರಿಸ್ ಮುಗಿಸಿ ವಾಪಸಾಗಿದ್ದ ವಿರಾಟ್ ಪತ್ನಿ ಮಕ್ಕಳೊಂದಿಗೆ ವೃಂದಾವನಕ್ಕೆ ಭೇಟಿ ನೀಡಿದ್ದರು
bigtvnews | Hubli Dharwad News | Kannada News | Karnataka News Hubli News | News In Hubli | Local news

