Breaking News

ಪೊಲೀಸರನ್ನು ಬಿಡದ ಕಳ್ಳರು : ಬೆಂಗಳೂರಲ್ಲಿ ಕಾನ್ಸ್ಟೇಬಲ್ ಮನೆಗೆ ನುಗ್ಗಿ, ಚಿನ್ನಾಭರಣ ದರೋಡೆ!

ಬೆಂಗಳೂರು : ಸಾಮಾನ್ಯವಾಗಿ ಜನರ ಮನೆಗೆ ನುಗ್ಗಿ ಚಿನ್ನಾಭರಣ ಅನ್ನೋದು ಕರಿಯುತ್ತಿದ್ದ ಕಳ್ಳರು ಇದೀಗ ಪೊಲೀಸರ ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೌದು ಬೆಂಗಳೂರು ನಗರದ ಜಾಲಹಳ್ಳಿ ಹೆಚ್‌ಎಟಿ ಪೊಲೀಸ್ ಕ್ವಾಟ್ರಸ್‌ನಲ್ಲಿ ವಾಸವಿದ್ದ ಶ್ರೀಧರ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಶ್ರೀಧರ್ ಎಂಬುವವರು ಕಾನ್‌ಸ್ಟೇಬಲ್ ಆಗಿದ್ದು, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀಧರ್ ಅವರ ಪತ್ನಿ ಕುಟುಂಬಸ್ಥರು ಮುರುಗೇಶ್ ಪಾಳ್ಯದಲ್ಲಿ ವಾಸವಾಗಿದ್ದರು. ಈ ಹಿನ್ನೆಲೆ ಶ್ರೀಧರ್ ಹಾಗೂ ಅವರ ಪತ್ನಿ ಅಲ್ಲಿಗೆ ತೆರಳಿದ್ದರು. ಈ ವೇಳೆ ಜಾಲಹಳ್ಳಿಯಲ್ಲಿರುವ ಕ್ವಾಟರ್ಸ್ನಲ್ಲಿ ಕಳ್ಳತನ ನಡೆದಿದೆ. ಮನೆಯಲ್ಲಿದ್ದ ನೆಕ್ಲೆಸ್, ಕಿವಿ ಓಲೆ, ಬೆಳ್ಳಿ ಹಾಗೂ ರೇಷ್ಮೆ ಸೀರೆ ಕಳ್ಳತನವಾಗಿದ್ದು, ಘಟನೆ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಜಾಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ದೀಪಾವಳಿ ಹಬ್ಬದ ದಿನವೇ ಕುಟುಂಬಸ್ಥರು ಕಣ್ಣೀರು! ಅಡ್ಡಾದಿಡ್ಡಿ ಕಾರು ಚಲಾಯಿಸಿ ಬೈಕ್​ ಸವಾರನ ಪ್ರಾಣ ತೆಗೆದ ಮಹಿಳೆ ಪರಾರಿ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಹಿಳೆಯೊಬ್ಬರು ವೇಗವಾಗಿ ಚಲಾಯಿಸುತ್ತಿದ್ದ ಮಹೀಂದ್ರಾ ಥಾರ್ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ 55 ವರ್ಷದ …

Leave a Reply

Your email address will not be published. Required fields are marked *