ಮಂಡ್ಯ: ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುವುದಕ್ಕೆ ಯಾರಿಗೂ ಯೋಗ್ಯತೆ ಇಲ್ಲ. ಈ ಬಗ್ಗೆ ಯಾರಿಗೂ ಹಕ್ಕು ಕೊಟ್ಟಿಲ್ಲ. ಸಿಎಂ ವಿಚಾರ ಏನಿದ್ದರೂ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ವಾಗ್ದಾಳಿ ನಡೆಸಿದರು. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಏನಿದ್ದರೂ ಎಐಸಿಸಿ ಅಧ್ಯಕ್ಷರು, ಸೋನಿಯಾಗಾಂಧಿ, ರಾಹುಲ್‌ಗಾಂಧಿ ಅವರಿಗೆ ಬಿಟ್ಟ ವಿಚಾರ. ಇದು ಬಹಿರಂಗವಾಗಿ ಸಿಎಂ ವಿಚಾರ ಮಾತನಾಡೋ ಯೋಗ್ಯತೆ ನಮಗೆ ಯಾರಿಗೂ ಇಲ್ಲ. ಮಾತನಾಡುವುದು ಅಕ್ಷಮ್ಯ ಎಂದು ಸಚಿವ ಸತೀಶ್‌ಜಾರಿಕಿಹೊಳಿ ಅವರಿಗೆ ತಿರುಗೇಟು ನೀಡಿದರು. ಸಹಜವಾಗಿ ಕೆಲವರಿಗೆ ರಾಜಕೀಯ ಅನುಭವ ಇಲ್ಲ. ಆಡಳಿತದ ಅನುಭವವೇ ಬೇರೆ, ಇತರೆ ಪಕ್ಷದ ರಾಜಕೀಯ ಅನುಭವವೇ ಬೇರೆ. ಈ ವಿಚಾರದಲ್ಲಿ ಕೆಲವರಿಗೆ ಅನುಭವದ ಕೊರತೆ ಇದೆ. ಅದಕ್ಕಾಗಿ ಆಗಾಗ್ಗೆ ಇಂತಹ ವಿಚಾರ ಕೇಳಿ ಬರುತ್ತಿದೆ. ಅವರು ತವರು ಜಿಲ್ಲೆಯ ಲೀಡರ್‌ಗಾಗಿ ಈ ರೀತಿಯ ಮಾತುಗಳನ್ನಾಡುತ್ತಿದ್ದಾರೆ ಎಂದು ಹೇಳಿದರು
bigtvnews | Hubli Dharwad News | Kannada News | Karnataka News Hubli News | News In Hubli | Local news





