ಮಾನಸಿಕ ಅಸ್ವಸ್ಥನೋರ್ವ ತನ್ನ ಅಣ್ಣನ ಪುಟ್ಟ ಮಗುವನ್ನು ಕೊಂದು, ತುಂಡು ತುಂಡು ಮಾಡಿ ತಲೆಯನ್ನು ಕೆರೆಗೆ ಎಸೆದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಮೊದಲೇ ಮಾನಸಿಕ ಅಸ್ವಸ್ಥನಾಗಿದ್ದ ಸಂಜಯ್, ಲೆಮೋರಿಯಾಳನ್ನು ಹಿತ್ತಲಿಗೆ ಎಳೆದುಕೊಂಡು ಹೋಗಿ, ಚಾಕು ತೆಗೆದುಕೊಂಡು ತಲೆಯನ್ನೇ ಕಡಿದಿದ್ದಾನೆ. ಮಗುವನ್ನು ಕೊಂದ ನಂತರ ಭಯಬಿದ್ದ ಸಂಜಯ್ ಕತ್ತರಿಸಿದ ತಲೆಯನ್ನು ಕೆರೆಯಲ್ಲಿ ಎಸೆದುಬಂದಿದ್ದಾನೆ.ಸುದ್ದಿ ತಿಳಿಯುತ್ತಿದ್ದಂತೆಯೇ ಎಮನೇಶ್ವರಂ ಪೊಲೀಸರು ಮಾಹಿತಿ ಪಡೆದು, ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ದೇಹ ಮತ್ತು ತಲೆ ಎರಡನ್ನೂ ಹೊರತೆಗೆಸಿದ್ದಾರೆ. ಬಾಲಕಿಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಮಕುಡಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಸಂಜಯ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

