ವ್ಯಕ್ತಿಯನ್ನು ಕೊಲೆ ಮಾಡಿ ಸುಟ್ಟು ಹಾಕಿರುವ ಅರೆಬೆಂದ ದೇಹ ಪತ್ತೆಯಾಗಿರುವ ಘಟನೆ ಸಮೀಪದ ಹಾಡ್ಲಿ ಗ್ರಾಮದ ಬಳಿ ಜರುಗಿದೆ.ಗ್ರಾಮದ ಸುಶೀಲಮ್ಮ ಕೋಂ ಲೇಟ್ ಸಿದ್ದೇಗೌಡರ ನೀಲಿಗಿರಿ ಜಮೀನಿನ ಆಜು-ಬಾಜಿನಲ್ಲಿ ಕುರಿ ಮೇಯಿಸುತ್ತಿದ್ದವರಿಗೆ ಸುಟ್ಟು ಹಾಕಿರುವ ಅರ್ಧ ಬೆಂದ ಮೃತದೇಹ ಇರುವುದನ್ನು ನೋಡಿ ತಕ್ಷಣ ಹಲಗೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.ಘಟನಾ ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಮತ್ತು ಸಬ್ ಇನ್ಸ್ ಪೆಕ್ಟರ್ ಲೋಕೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ವ್ಯಕ್ತಿಯನ್ನು ಕೊಲೆ ಮಾಡಿ ದೇಹ ಪತ್ತೆ ಆಗಬಾರದೆಂಬ ದೃಷ್ಟಿಯಿಂದ ಸುಟ್ಟು ಹಾಕಲು ಪ್ರಯತ್ನಿಸಿ ಅರ್ಧ ಬೆಂದ ದೇಹವನ್ನು ಬಿಟ್ಟು ಹೋಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

