Breaking News

ಕುಂದಗೋಳ : “ಶ್ರೀ ಬ್ರಹ್ಮದೇವರ” ಅಗ್ರಪೂಜೆ….

ಐತಿಹಾಸಿಕವಾಗಿ ತನ್ನದೇ ಆದ ಮಹತ್ವ ಪಡೆದಿರೋ ಕುಂದಗೋಳದಲ್ಲಿ ಆಚರಿಸುವ ಕಾರ ಹುಣ್ಣಿಮೆಯಲ್ಲಿ ಪಟ್ಟಣದ ಮಧ್ಯಭಾಗದಲಿರುವ ದೇವಾಲಯದ ಶ್ರೀ ಬ್ರಹ್ಮದೇವರಿಗೆ” ಅಗ್ರಪೂಜೆ ನಡೆಯುತ್ತದೆ.” ರೈತರಂತೂ ತಮ್ಮ ಬಸವಣ್ಣ (ಎತ್ತುಗಳ) ಕೋಡುಗಳನ್ನು ಸವರಿ ಕೊಂಬುಗಳಿಗೆ ವಿವಿಧ ಬಣ್ಣ ಹಚ್ಚಿ ಕರಿಬಂಡಿ ಉತ್ಸವವಿರುವ ದಿನದಂದು ವಿವಿಧ ಭೋಜನ ತಯಾರಿಸಿ ಕರಿ ಹರಿಯುತ್ತಾರೆ. ಕರಿಬಂಡಿ ಉತ್ಸವದಲ್ಲಿ ಎರಡು ಭಂಡಿಗಳು ಭಾಗವಹಿಸುತ್ತವೆ.

ಗೌಡರು, ಶ್ಯಾನುಭೋಗರ ಮನೆತನದ ಬಂಡಿ
ಒಂದು ಭಂಡಿಯನ್ನು ಗೌಡರ ಬಂಡಿ ಎಂದೂ, ಮತ್ತೊಂದನ್ನು ಶ್ಯಾನಭೋಗರ ಬಂಡಿ ಎಂದೂ ಗುರುತಿಸುತ್ತಾರೆ. ಅರ್ಚಕರ ಎರಡು ಬಂಡಿಗೆ ಪೂಜೆ ಸಲ್ಲಿಸಿದ ನಂತರ ವೀರಗಾರರಿಗೆ “ಆಡಿ ಬನ್ನಿ” ಎಂದು ಹೇಳುತ್ತಾರೆ. “ಮೂಲಾ ನಕ್ಷತ್ರದ” ಸಮಯದಲ್ಲಿ ವೀರಗಾರರು ಈ ಬಂಡಿಗಳನ್ನು ಏರಿ “ಜಯಬ್ರಹ್ಮ ಲಿಂಗೋಂ” ಲಕ್ಷ್ಮೀ ನಾರಸಿಂಹ ಹೋಂ” ಎಂದು ಶ್ರೀ ಬ್ರಹ್ಮದೇವರ ನಾಮಸ್ಮರಣೆ ಮಾಡುತ್ತಾ ಗುಡಿಗೆ ಬಂದು ಹೋಗುತ್ತಾರೆ. ದಾರಿಯುದ್ದಕ್ಕೂ ಜನರು ಜಯಘೋಷ ಹಾಕುತ್ತಾ ಬಂಡಿಗಳು ಓಡುವುದನ್ನು ನೋಡಲು ಕಾತುರದಿಂದ ಕಾಯುತ್ತಿರುತ್ತಾರೆ. ಬಂಡಿಗಳು ದೇವಸ್ಥಾನಕ್ಕೆ ತೆರಳಿ ಪ್ರದಕ್ಷಿಣೆ ಹಾಕಿ ಮತ್ತೆ ಅರ್ಚಕರ ಮನೆಯ ಕಡೆ ತೆರಳುತ್ತವೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *