ಹಳೇ ಹುಬ್ಬಳ್ಳಿ ಹೊಸ ಆನಂದನಗರದ ಸಮೀಪದ ಮಸೀದಿ ಬಳಿ ಇತ್ತೀಚಿಗೆ ಎರೆಡು ಜನ ತಲಾವಾರ ಹಿಡಿದು ರೀಲ್ಸ್ ಮಾಡುತ್ತಿದ್ದರು, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ಬಂಧನ ಮಾಡಿ, ಇಂಡಿಯನ್ ಆರ್ಮ್ಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಬಂಧಿತ ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಸಿದ ಸಂದರ್ಭ, ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ, ಹೌದು ಬಂಧಿತ ಆರೋಪಿಗಳು ಜೊತೆಗೆ ಇನ್ನೆರೆಡು ಜನರನ್ನು ಸೇರಿಸಿಕೊಂಡು ನಗರದ ವಿವಿಧ ಕಡೆಗಳಲ್ಲಿ ಚಿನ್ನಾಭರಣ ಹಾಗೂ ಮೋಟರ್ ಸೈಕಲ್ ಗಳನ್ನು ಕಳ್ಳತನ ಮಾಡಿರುವುದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಗೋಪಾಲ ವಾಲ್ಮೀಕಿ, ಹನುಮಂತ ಮಣ್ಣವಡ್ಡರ, ಆರಿಫ್ ವಾಲ್ಮೀಕಿ, ಲಿಯಾಖತ್ತಅಲಿ ಮಡಗಾವಿ ಬಂಧಿತ ಆರೋಪಿಯಾಗಿದ್ದಾರೆ. ಬಂಧಿತರಿಂದ 9 ಬೈಕ್ ಗಳು, 2೦ ಗ್ರಾಂ ಬಂಗಾರದ ಸರ ಹಾಗೂ ಎರೆಡು ತಲ್ವಾರ್ ಗಳನ್ನು ಜಪ್ತಿ ಮಾಡಿದ್ದಾರೆ. ಒಟ್ಟು 6 ಲಕ್ಷ ರೂ. ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ಜೈಲಿಗೆ ಅಟ್ಟಿದ್ದಾರೆ.ಎಸಿಪಿ ಉಮೇಶ್ ಚಿಕ್ಕಮಠ ಅವರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

