Breaking News

ಇರಾನ್‌ನ ಅಣ್ವಸ್ತ್ರ ಘಟಕದ ಮೇಲೆ ಇಸ್ರೇಲ್‌ ಬಾಂಬ್‌!!

ಇರಾನ್‌ ನಡೆಸಿದ ಕ್ಲಸ್ಟರ್‌ ದಾಳಿಯಿಂದ ಕೊಂಚ ಹಾನಿಯ ಅನುಭವಿಸಿದ್ದ ಇಸ್ರೇಲ್‌ ಮತ್ತೆ ಸಿಡಿದೆದ್ದಿದ್ದು, ಇರಾನ್‌ನ ಪ್ರಮುಖ ಅಣ್ವಸ್ತ್ರ ಘಟಕವಾದ ಇಸ್ಫಹಾನ್ ಅಣ್ವಸ್ತ್ರ ಘಟಕದ ಮೇಲೆ 2ನೇ ಬಾರಿ ದಾಳಿ ಮಾಡಿದೆ.ಇರಾನ್‌ ಭೂಗತವಾಗಿ ನಿರ್ಮಿಸಿರುವ ಅಣ್ವಸ್ತ್ರ ತಯಾರಿಕಾ ಘಟಕ ಧ್ವಂಸಕ್ಕೆ ಅಗತ್ಯವಾದ ಬಂಕರ್‌ ಬಸ್ಟರ್‌ ಬಾಂಬ್‌ಗಳನ್ನು ಹೊತ್ತುತಂದು ದಾಳಿ ನಡೆಸುವ ಬಿ-2 ಸ್ಟೆಲ್ತರ್‌ ವಿಮಾನಗಳನ್ನು ಅಮೆರಿಕ ಸೇನೆಯು ಇರಾನ್‌ನತ್ತ ಸಾಗಿಸಿದೆ ಎಂದು ವರದಿಗಳು ಹೇಳಿವೆ. ಭೂಮಿಯಲ್ಲಿ 200 ಅಡಿದ ಆಳದವರೆಗೂ ಸಾಗಿ ಗುರಿ ಧ್ವಂಸ ನಾಶ ಮಾಡಬಲ್ಲ ಈ ಬಾಂಬ್‌ಗೆ ಇತ್ತೀಚೆಗೆ ಇಸ್ರೇಲ್‌ ಅಮೆರಿಕಕ್ಕೆ ಬೇಡಿಕೆ ಸಲ್ಲಿಸಿತ್ತು.ಇರಾನ್‌ ಕ್ಷಿಪಣಿ ದಾಳಿ ನಡೆಸುವ ಬಗ್ಗೆ ಎಚ್ಚರಿಕೆ ಲಭಿಸುತ್ತಿದ್ದಂತೆ, ರಾಜಧಾನಿ ಟೆಲ್‌ ಅವಿವ್‌ ಸೇರಿ ಮಧ್ಯ ಇಸ್ರೇಲ್‌, ವೆಸ್ಟ್‌ ಬ್ಯಾಂಕ್‌ನಲ್ಲಿ ಸೈರನ್‌ಗಳು ಮೊಳಗಿವೆ. ಬಳಿಕ ಗಾಳಿಯಲ್ಲೇ ಇರಾನ್‌ನ ಕ್ಷಿಪಣಿಗಳು ಧ್ವಂಸವಾಗುತ್ತಿದ್ದುದೂ ಕಂಡುಬಂದಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *