Breaking News

ಹಳೆ ದ್ವೇಷ : ಯುವಕನಿಗೆ ಚಾಕುವಿನಿಂದ ಚುಚ್ಚಿ ಕೊಲೆ

ಹುಬ್ಬಳ್ಳಿ: ಹಳೆ ದ್ವೇಷದ ಹಿನ್ನೆಲೆ ಯುವಕನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆಗೀಡಾದ ವ್ಯಕ್ತಿ ಹಳೆ ಹುಬ್ಬಳ್ಳಿಯ ಸದರಸೋಫಾ ನಿವಾಸಿ ಜಾಫರ್ ದಡೆಸುರ್ ಎಂದು ತಿಳಿದುಬಂದಿದೆ.

ಜಾಫರ್ ನನ್ನು ಮೂರು ಯುವಕರ ಗುಂಪು ಕೂಡಿದ ಮತ್ತಿನಲ್ಲಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ, ಚಾಕುವಿನ ಇರಿತದಿಂದ ಗಾಯಗೊಂಡ ಜಾಫರನನ್ನು ಆತನ ಸ್ನೇಹಿತರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ, ತೀವ್ರ ರಕ್ತ ಸ್ರಾವ ಆಗಿರುವುದರಿಂದ ಜಾಫರ್ ಚಿಕಿಸ್ತೆ ಫಲಕಾರಿಯಾಗದೆ ಮೃತಪಟ್ಟಿದ್ದಾರನೆ.

ಕಿಮ್ಸ್ ಆಸ್ಪತ್ರೆಗೆ ಡಿಸಿಪಿ ಸಾಹಿಲ್ ಬಾಗ್ಲಾ ಹಾಗೂ ಕಸಬಾಪೇಟೆ ಪೊಲೀಸರು ಬೇಟಿ ನೀಡಿ ಜಾಫರ್ ಸಹೋದರನಿಂದ ಹೆಚ್ಚಿನ ಮಾಹಿತಿ ಪಡೆದಿದ್ದಾರೆ. ಕೊಲೆ ಮಾಡಿ ಪರಾರಿ ಆದ ಮೂರು ಜನರ ಪತ್ತೆಗಾಗಿ ಬಲೆ ಬೀಸಿದ್ದಾರೆ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *