ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಹೊಲಿಗೆಗೆ ಕೊಟ್ಟಿದ್ದ ಸಮವಸ್ತ್ರ ಸಕಾಲಕ್ಕೆ ಸಿಗಲಿಲ್ಲ ಎಂಬ ಕಾರಣಕ್ಕಾಗಿ ವಿದ್ಯಾರ್ಥಿನಿ ಒಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಲಿಂಗದಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ನಿವೇದಿತ ಈಕೆಯ ಪಾಲಕರು ಶಾಲೆಯಿಂದ ನೀಡಿದ್ದ ಸಮವಸ್ತ್ರ ಬಟ್ಟೆಯನ್ನು ಗ್ರಾಮದ ಟೈಲರ್ ಒಬ್ಬರ ಬಳಿ ಹೊಲಿಯಲು ಕೊಟ್ಟಿದ್ದಾರೆ ಸೋಮವಾರದಿಂದ ಸಮವಸ್ತ್ರ ಧರಿಸಿಕೊಂಡು ಶಾಲೆಗೆ ಬರಬೇಕು ಎಂದು ಶಿಕ್ಷಕರು ಸೂಚಿಸಿದ್ದರು. ಆದರೆ ಟೈಲರ್ ಸಮಯಕ್ಕೆ ಸರಿಯಾಗಿ ಸಮವಸ್ತ್ರ ಹೊಲಿದುಕೊಡದ ಕಾರಣ ಭಯಗೊಂಡ ಬಾಲಕಿ ಮನೆಯಲ್ಲಿಯೇ ವಿಷ ಸೇವಿಸಿದ್ದಾಳೆ ಆಸ್ಪತ್ರೆಗೆ ಕೂಡಲೇ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

