ಪ್ರೀತಿಗೆ ಮದುವೆಯಾಗಿ ಮಕ್ಕಳಿದ್ದರೂ ಪುನೀತ್ ಹಿಂದೆ ಬಿದ್ದಿದ್ದಳು. ಕಳೆದ ಭಾನುವಾರ ಮೈಸೂರು, ಮಂಡ್ಯ ಅಂತ ಟ್ರಿಪ್ ಹೋಗಿದ್ದ ಇಬ್ಬರು ಜಾಲಿಯಾಗಿ ಸಮಯ ಕಳೆದಿದ್ದರು. ಕೆ ಆರ್ ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ. ನಂತರ ಈತ ಮಹಿಳೆಯನ್ನ ಕೊಲೆ ಮಾಡಿ ಚಿನ್ನಾಭರಣ ದೋಚಿ ತನ್ನದೇ ಜಮೀನಿನಲ್ಲಿ ಶವ ಬಚ್ಚಿಟ್ಟು ಪರಾರಿಯಾಗಿದ್ದಾನೆ. ನಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ಪುನೀತ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ . ಒಟ್ಟಿನಲ್ಲಿ ಮದುವೆಯಾಗಿ ಮಕ್ಕಳಿದ್ದರೂ ಪುನೀತ್ ಹಿಂದೆ ಬಿದ್ದ ಮಹಿಳೆ ದುರಂತ ಅಂತ್ಯ ಕಂಡಿದ್ದಾಳೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

