ಧಾರವಾಢದ ಸಬ್ ಅರ್ಬನ್ ಪಿಎಸ್ ವ್ಯಾಪ್ತಿಯಲ್ಲಿಯ ಹಾವೇರಿಗಲ್ಲಿಯಲ್ಲಿ ಹಣದ ವಿಚಾರಕ್ಕೆ ಖಾವಾಜ ಶಿರಹಟ್ಟಿ ಎಂಬುವನು ರಾಘವೇಂದ್ರ ಗಾಯಕ್ವಾಡ್ ಎಂಬುವನಿಗೆ ಚಾಕು ಹಾಕಿದ್ದು ಇದರಿಂದ ಒಟ್ಟು 6 ಗಾಯಗಳು ಉಂಟಾಗಿದ್ದು, ಗಾಯಾಳು ಪ್ರಾಣಾಪಾಯದಿಂದ ಪಾರಾಗಿ KMC ಹುಬ್ಬಳ್ಳಿ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಆರೋಪಿತನಾದ ಖಾವಾಜ ಶಿರಹಟ್ಟಿ ಇವನು

ಧಾರವಾಡ ಸಬ್ ಅರ್ಬನ್ ಠಾಣಾ ಪಿಐ ಮತ್ತು ಸಿಬ್ಬಂಧಿಗಳು ದಸ್ತಗಿರಿ ಮಾಡಿದ್ದು, ಈ ಕೃತ್ಯ ನಡೆಯುವಾಗ ಮತ್ತೊಬ್ಬ ಆರೋಪಿಯೂ ಇದ್ದುದಾಗಿಯೂ, ಆತನನ್ನು ತೋರಿಸುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದು ಧಾರವಾಡದ ಹೊರವಲುಲಯಕ್ಕೆ ಕರೆದುಕೊಂಡು ಹೊಗಿದ್ದು ಅಲ್ಲಿ ಆರೋಪಿಯು ಪಿಐ ದಯಾನಂದ ಹಾಗೂ ಪೊಲೀಸರಿಗೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಾಗ ಆತನಿಗೆ ಶರಣಾಗಲು ತಿಳಿಸಿದರೂ ಸಹ ಆತ ಪೊಲೀಸ್ ವಶದಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಾಗ ಆತನಿಗೆ ಎಚ್ಚರ ನೀಡಿದರೂ ಆತ ಹಲ್ಲೆ ನಡೆಸಲು ಪ್ರಯತ್ನ ಪಟ್ಟಾಗ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದರೂ ಸಹ ಆತ ಶರಣಾಗದೆ ಇದ್ದು, ಆಗ ಆತನ ಎಡಗಾಲಿಗೆ ಒಂದು ಗುಂಡು ಹಾರಿದ್ದು ಆತನನ್ನು ಧಾರವಾಢ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

