ಗಂಗೆಯಲ್ಲಿ ಮೂವರು ಬಾಲಕರು ಮುಳುಗಿ ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.ಪ್ರಯಾಗ್‌ರಾಜ್ ಸಮೀಪದ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಮೂವರು ಹದಿಹರೆಯದ ಬಾಲಕರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಮೂವರು ಬಾಲಕರ ಶವಗಳನ್ನು ಹೊರತೆಗೆಯಲಾಗಿದೆ ಎಂದು ಎಸಿಪಿ (ಧೂಮಂಗಂಜ್) ಅಜೇಂದ್ರ ಯಾದವ್ ತಿಳಿಸಿದ್ದಾರೆ.ಮೃತರನ್ನು 15 ವರ್ಷದ ಅಮನ್, 13 ವರ್ಷದ ಮನೀಷ್ ಮತ್ತು 14 ವರ್ಷದ ಶೌರ್ಯ ಪಾಲ್ ಎಂದು ಗುರುತಿಸಲಾಗಿದೆ – ಇವರೆಲ್ಲರೂ ಮುಂಡೇರಾ ಪ್ರದೇಶದವರು.
bigtvnews | Hubli Dharwad News | Kannada News | Karnataka News Hubli News | News In Hubli | Local news

