ಚಿಂತಾಮಣಿ: ನಗರದ ಕನ್ನಂಪಲ್ಲಿ ಚೌಡೇಶ್ವರ ಬಡಾವಣೆಯಲ್ಲಿ ಮನೆಗೆ ಕನ್ನ ಹಾಕಿದ ಖದೀಮರು, 231 ಗ್ರಾಂ ಚಿನ್ನಾಭರಣ, 2 ಕೆಜಿ ಬೆಳ್ಳಿ ಮತ್ತು 25 ಸಾವಿರ ರೂ.ಕಳವು ಮಾಡಿದ್ದಾರೆ. ಸಂಬಂಧಿಕರೊಬ್ಬರ ನಾಮಕರಣದ ಬಟ್ಟೆಗಳ ಖರೀದಿಗಾಗಿ ಬೆಂಗಳೂರಿಗೆ ಮಾ.28ರಂದು ರಾತ್ರಿ ಪತ್ನಿಯೊಂದಿಗೆ ಹೋಗಿದ್ದು, 30ರಂದು ಬಾಗಿಲು ತೆಗೆದು ನೋಡಿದಾಗ ಬೀರು, ಕಬೋರ್ಡ್ಗಳಲ್ಲಿದ್ದ ಬಂಗಾರ, ಬೆಳ್ಳಿ ವಸ್ತುಗಳು ಮತ್ತು 25ಸಾವಿರ ರೂ.ನಗದು ದೋಚಿರುವುದು ಗೊತ್ತಾಯಿತು ಎಂದು ಮನೆ ಮಾಲೀಕ, ಯಗವಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕ ಮಂಜುನಾಥ್ ಚಿಂತಾಮಣಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

