ಕಳೆದ ಆವೃತ್ತಿಯ ಬಿಗ್‌ಬಾಸ್ ವೇಳೆ ಜಗದೀಶ್ ಮೇಲೆ ಹಲ್ಲೆಗೆ ಯತ್ನಿಸಿ ಅರ್ಧದಲ್ಲೇ ಸೀಸನ್‌ನಿಂದ ಹೊರಬಿದ್ದಿದ್ದ ಕಿರುತೆರೆ ನಟ ರಂಜಿತ್ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ದೂರನ್ನು ದಾಖಲಿಸಿರುವುದು ಅವರ ಬಾವ ಜಗದೀಶ್ ರಂಜಿತ್‌ನಿಂದ ನನಗೆ ಜೀವ ಬೆದರಿಕೆ ಇದೆ ಎನ್ನುವ ಆರೋಪದಲ್ಲಿ ಜಗದೀಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 2018 ರಿಂದ ಅಮೃತಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಜಗದೀಶ್ ಅವರ ಕುಟುಂಬ ವಾಸವಿದೆ. 2025 ರಿಂದ ಇದೇ ಫ್ಲ್ಯಾಟ್ ನಲ್ಲಿ ಅಕ್ಕ ಭಾವನ ಜೊತೆ ರಂಜಿತ್ ವಾಸವಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.ಪೊಲೀಸರು ಇಬ್ಬರಿಗೂ ಬುದ್ದಿ ಹೇಳಿ ಕೋರ್ಟ್‌ನಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ಸೂಚನೆ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

