ಜೊತೆ ಜೊತೆಯಲಿ’ ಧಾರವಾಹಿ ಖ್ಯಾತಿಯ ನಟ ಹರೀಶ್ ರಾಜ್ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ. ‘ಕಲಾಕರ್’ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶನಕ್ಕೆ ಬಿಗ್ ಬಾಸ್ ಹರೀಶ್ ರಾಜ್ ಕೈ ಹಾಕಿದ್ದು, ಸದ್ಯ ಹರೀಶ್ ರಾಜ್ ನಿರ್ದೇಶನದ ‘ಪ್ರೇತʼ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ.
ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡ ಸಿನಿಮಾ ಪ್ರೇಮಿಗಳನ್ನು ರಂಜಿಸುತ್ತಿರುವ ರಾಜ್ ನಟನಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟು 25 ವರ್ಷ ಕಳೆದಿದೆ. ಬೆಳ್ಳಿ ಸಂಭ್ರಮದ ಖುಷಿಯಲ್ಲಿರುವ ನಟ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ. ನಟನೆ ಜೊತೆಗೆ ನಿರ್ದೇಶನದಲ್ಲಿಯೂ ಹೆಸರು ಮಾಡಿರುವ ಹರೀಶ್ ರಾಜ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.
ಹರೀಶ್ ರಾಜ್ ತಮ್ಮದೇ ಪ್ರೊಡಕ್ಷನ್ ಅಡಿಯಲ್ಲಿ ‘ಪ್ರೇತ’ ಎಂಬ ಹೆಸರಿನ ಸಿನಿಮಾವನ್ನು ನಿರ್ದೇಶಿಸಿ, ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಕತ್ತಲೇ ಕಾಡಿನಲ್ಲಿ ಭಯಭೀತರಾಗಿ ನಿಂತಿರುವ ಹರೀಶ್ ರಾಜ್, ಅವರ ಹಿಂದೆ ಭೂತದ ರೀತಿಯ ಆಕೃತಿ ಲುಕ್ ಸಿನಿ ಪ್ರೇಮಿಗಳ ದಿಲ್ ಕದ್ದಿದೆ.
ಪ್ರೇತ ಸಿನಿಮಾದ ಟೈಟಲ್ ಹೇಳುವಂತೆ ಇದೊಂದು ಹಾರರ್ ಸಿನಿಮಾವಾಗಿದ್ದು, ಈ ಚಿತ್ರಕ್ಕೆ ಹರೀಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅಹಿರಾ ಶೆಟ್ಟಿ, ಅಮೂಲ್ಯ ಭಾರದ್ವಾಜ್, ಬಿ ಎಂ ವೆಂಕಟೇಶ್, ಅಮಿತ್ ತಾರಾಬಳಗದಲ್ಲಿದ್ದಾರೆ.
‘ಪ್ರೇತ’ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗುತ್ತಿದ್ದು, ಕನ್ನಡ, ತಮಿಳು, ಹಿಂದಿ, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ಮೂಡಿಬರುತ್ತಿದೆ. ಈಗಾಗಲೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಪ್ರೇತ ಸಿನಿಮಾವನ್ನು ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news





