ನೆಲದ ಮೇಲೆ ಬಿದ್ದಿದ್ದ ಯುವಕನ ಎದೆಗೆ ಒಂದರ ನಂತರ ಒಂದರಂತೆ ಮೂರು ಗುಂಡುಗಳನ್ನು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಆದಿಲ್ ಹತ್ಯೆಯಲ್ಲಿ ಭಾಗಿಯಾಗಿರುವ ಶಂಕಿತರನ್ನು ಹುಡುಕಲು ನಾಲ್ಕು ತಂಡಗಳನ್ನು ನಿಯೋಜಿಸಲಾಗಿದೆ. SWAT ತಂಡವು ಇನ್ನೂ ಯಾವುದೇ ಶಂಕಿತರನ್ನು ಬಂಧಿಸಿಲ್ಲ. ನಗರ ಎಸ್‌ಪಿ ಆಯುಷ್ ವಿಕ್ರಮ್ ಸಿಂಗ್ ಅವರ ಪ್ರಕಾರ, ವೀಡಿಯೊ ಬೆಳಕಿಗೆ ಬಂದಿದೆ ಮತ್ತು ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಹುಡುಕಾಟಕ್ಕೆ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ. ಪ್ರಸ್ತುತ, ಆರೋಪಿಗಳ ಹುಡುಕಾಟಕ್ಕಾಗಿ ಹಲವಾರು ಜಿಲ್ಲೆಗಳಲ್ಲಿ ದಾಳಿಗಳು ನಡೆಯುತ್ತಿವೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

