Breaking News

ಬೆಂಗಳೂರಲ್ಲಿ ಇಂಜೆಕ್ಷನ್ ಕೊಟ್ಟು ವೈದ್ಯೆ ಪತ್ನಿಯನ್ನೇ ಕೊಂದ ಡಾಕ್ಟರ್: FSL ವರದಿಯಲ್ಲಿ ಸತ್ಯ ಬಯಲು, ಅರೆಸ್ಟ್.

ನಗರದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ ಎನ್ನುವಂತೆ ವೈದ್ಯ ಪತ್ನಿಯನ್ನೇ ಇಂಜೆಕ್ಷನ್ ನೀಡಿ ಡಾಕ್ಟರ್ ಪತಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂಬುದಾಗಿ ನಾಟಕವಾಡಿದ್ದಾರೆ. ಆ ಬಳಿಕ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಇಂಜೆಕ್ಷನ್ ನೀಡಿ ಹತ್ಯೆಗೈದಿರುವಂತ ಶಾಕಿಂಗ್ ಮಾಹಿತಿ ಬಹಿರಂಗವಾಗಿದೆ.ಮದುವೆಯ ನಂತ್ರ ಪತ್ನಿ ಡಾ.ಕೃತಿಕಾರೆಡ್ಡಿಗೆ ಇರುವಂತ ಅನಾರೋಗ್ಯ ಸಮಸ್ಯೆಯು ಪತಿ ಡಾ.ಮಹೇಂದ್ರರೆಡ್ಡಿಗೆ ಗೊತ್ತಾಗಿತ್ತು. ಇದೇ ಕಾರಣಕ್ಕೆ ಪ್ರತಿದಿನ ವಾಂತಿ, ಇತರೆ ಸಮಸ್ಯೆಯಿಂದ ಬಳಲುತ್ತಿದ್ದಂತ ಪತ್ನಿ ಡಾ.ಕೃತಿಕಾರೆಡ್ಡಿ ಹತ್ಯೆಗೆ ಪ್ಲಾನ್ ಮಾಡಿದ್ದರು.

ಹುಷಾರು ತಪ್ಪಿದ್ದ ಕಾರಣ ತವರು ಮನೆಗೆ ತೆರಳಿದ್ದಂತ ಡಾ.ಕೃತಿಕಾರೆಡ್ಡಿಗೆ ಪತಿ ಡಾ.ಮಹೇಂದ್ರರೆಡ್ಡಿ ಔಷದೋಪಚಾರವನ್ನು ಎರಡು ದಿನ ಮಾಡಿದ್ದರು. ಆದರೇ ಪ್ರಜ್ಞೆ ತಪ್ಪಿದಂತ ಡಾ.ಕೃತಿಕಾರೆಡ್ಡಿಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.

Share News

About BigTv News

Check Also

ದಲಿತ ಮಹಿಳೆಗೆ ಜಾತಿ ನಿಂದನೆ ಮಾಡಿ, ಲೈಂಗಿಕ ಕಿರುಕುಳ : ‘MSIL’ ಅಧಿಕಾರಿಗಳ ವಿರುದ್ಧ ದೂರು ದಾಖಲು!

ಬೆಂಗಳೂರು : ದಲಿತ ಮಹಿಳೆಯನ್ನು ಎಂಎಸ್‌ಐಎಲ್ ಅಧಿಕಾರಿಗಳು ಇದೀಗ ಅವಮಾನ ಮಾಡಿದ್ದಾರೆ. ಎಂಎಸ್‌ಐಎಲ್ ನಲ್ಲಿ ಕೆಲಸ ಮಾಡುತ್ತಿರುವ ದಲಿತ ಮಹಿಳೆಯ …

Leave a Reply

Your email address will not be published. Required fields are marked *