Breaking News

ಧಾರವಾಡದ ಶಿವಾಜಿ ಮಹಾರಾಜ ಪದವಿ ಕಾಲೇಜು ಸಭಾಂಗಣದಲ್ಲಿ ನಾಳೆ ಪವಾಡ ರಹಸ್ಯ ಬಯಲು ಕಾರ್ಯಕ್ರಮ….

ಧಾರವಾಡ: ಧಾರವಾಡದ ಶಿವಾಜಿ ಮಹಾರಾಜ ಪದವಿ ಕಾಲೇಜು ಸಭಾಂಗಣದಲ್ಲಿ ನಾಳೆ ಶುಕ್ರವಾರ ಮದ್ಯಾಹ್ನ 2,30, ಗಂಟೆಗೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಖ್ಯಾತ ಪವಾಡ ತಜ್ಞರು, ಕುಂದಗೋಳ ತಾಲೂಕಿನ ಭಾರತ ಜ್ಞಾನ ವಿಜ್ಞಾನ ಸಮಿತಿಯ ಅದ್ಯಕ್ಷರೂ ಆಗಿರುವ ಡಾ, ಮಂಜುನಾಥ ಬಾರಕೇರ ಅವರಿಂದ ವೈಜ್ಞಾನಿಕ ಮನೋವೃತ್ತಿ ಮೂಡಿಸುವ ಉದ್ದೇಶದಿಂದ, ನ್ಯಾಶನಲ್ ಸೈಂಟಿಫಿಕ್ ಟೆಂಪರ್ ಡೇ ಅಂಗವಾಗಿ, ಈ ಕಾರ್ಯಕ್ರಮ ಜರುಗಲಿದ್ದು, ಮರಾಠ ವಿದ್ಯಾ ಪ್ರಸಾರಕ ಮಂಡಳಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಪದವಿ ಕಾಲೇಜು, ಜ್ಞಾನಯೋಗಿ ವಿದ್ಯಾ ಸಂಸ್ಥೆಗಳ ಸಯಹೊಗದೊಂದಿಗೆ ಈ ಕಾರ್ಯಕ್ರಮ ಜರುಗಲಿದೆ, ಮರಾಠ ವಿದ್ಯಾ ಪ್ರಸಾರಕ ಮಂಡಳಿಯ ಅಧ್ಯಕ್ಷರಾದ ಎಂ ಎನ್ ಮೋರೆ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಧಾರವಾಡ ಜಿಲ್ಲೆಯ ಗೌರವಾದ್ಯಕ್ಷರಾದ ಶಂಕರ ಹಲಗತ್ತಿ ವಹಿಸುವರು, ಮುಖ್ಯ ಅತಿಥಿಗಳಾಗಿ, ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಕಾರ್ಯದರ್ಶಿ ಶುಭಂಕರ ಚಕ್ರವರ್ತಿ, ಧಾರವಾಡ ನಗರದ ಕ್ಷೇತ್ರಶಿಕ್ಷಣಾಧಿಕಾರಿ ಅಶೋಕ ಸಿಂದಗಿ ಬಿಜಿವಿಎಸ್, ರಾಜ್ಯ ಉಪಾಧ್ಯಕ್ಷರಾದ ಎಫ್ ಸಿ ಚೇಗರಡ್ಡಿ, ಧಾರವಾಡ ಜಿಲ್ಲೆಯ ಉಸ್ತುವಾರಿ ಪಾಂಡುರಂಗ ಜಟಗಣ್ಣವರ, ಆಗಮಿಸಲಿದ್ದು, ಭಾರತ ಜ್ಞಾನ ವಿಜ್ಞಾನ ಸಮಿತಿಯ ಧಾರವಾಡ ಜಿಲ್ಲಾ ಅದ್ಯಕ್ಷರಾದ ಗುರು ತಿಗಡಿ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಗೌರವಾದ್ಯಕ್ಷರಾದ ಭೀಮಪ್ಪ ಕಾಸಾಯಿ, ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನ ಕಾಲೇಜಿನ ಪ್ರಾಂಶುಪಾಲರಾದ ಎಂ ಎಸ್ ಗಾಣಿಗೇರ, ಬಿಜಿವಿಎಸ್ ನ ಧಾರವಾಡ ನಗರದ ಹಿರಿಯ ಸದಸ್ಯರುಗಳಾದ ವಿ ಎನ್ ಕೀರ್ತಿವತಿ ಪ್ರಮೀಳಾ ಜಕ್ಕಣ್ಣವರ ಹಸೀನ ಸಮುದ್ರಿ ಎಸ್ ಆರ್ ದಂಡಿನ ನವಲಗುಂದದ ಎ ಬಿ ಕೊಪ್ಪದ ಹುಬ್ಬಳ್ಳಿಯ ಡಾ, ಲಿಂಗರಾಜ ರಾಮಾಪೂರ ಮನಗುಂಡಿಯ ಶಾಲಾಭಿವೃದ್ದಿ ಸಮಿತಿಯ ಅದ್ಯಕ್ಷರಾದ ನಿಂಗಪ್ಪ ಹಡಪದ ಶಿಕ್ಷಕರ ವಿವಿಧ ಸಂಘಟನೆಯ ಅದ್ಯಕ್ಷರುಗಳಾದ ಶಾಂತಾ ಶೀಲವಂತ ಅಕ್ಬರಲಿ ಸೋಲಾಪೂರ ಕಾಶಪ್ಪ ದೊಡವಾಡ ಆಗಮಿಸುವರು ಎಂದು ರಾಜ್ಯ ಸಮಿತಿಯ ಸದಸ್ಯ ಎಲ್ ಐ ಲಕ್ಕಮ್ಮನವರ ಹಾಗೂ ಧಾರವಾಡ ನಗರದ ಅಧ್ಯಕ್ಷರಾದ ಎಂ ಆರ್ ಕಬ್ಬೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share News

About BigTv News

Check Also

ಕೃಷಿ ಮೇಳ ಕೇವಲ ಯಂತ್ರೋಪಕರಣಗಳ ಪ್ರದರ್ಶನವಾಗಬಾರದು..! ರೈತರಿಗೆ ಜ್ಞಾನ ನೀಡುವ ಪ್ರಾತ್ಯಕ್ಷಿಕೆಗಳಿಗೆ ಆದ್ಯತೆ ಸಿಗಲಿ…

ಪಾರಂಪರಿಕ ಕೃಷಿ ಜೊತೆ ವೈಜ್ಞಾನಿಕ ಕೃಷಿಯೂ ಬರಲಿ..! ರೈತರಿಗೆ ನೇರವಾಗಿ ಉಪಯೋಗವಾಗುವ ಕೃಷಿ ಮೇಳ ಬೇಕು: ಡಿಸಿಪಿ ರವೀಶ್ ಕೃಷಿ …

Leave a Reply

Your email address will not be published. Required fields are marked *