ಹಾನಗಲ್ ಹಳೇ ಬಸ್ ನಿಲ್ದಾಣ ಬಳಿಯ ಕ್ವಾಟಿಗೇರಿ ಓಣಿಯ ಮನೆಯೊಂದರ ಬಾಗಿಲು ಮೀಟಿ ಮುರಿದು ಕಳ್ಳತನ ಮಾಡಲಾಗಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮನೆಯಲ್ಲಿ ಯಾರೋ ಇಲ್ಲದ ಸಂದರ್ಭದಲ್ಲಿ ಕಳ್ಳತನ ನಡೆದಿರುವ ಬಗ್ಗೆ ಮಾಲೀಕ ಅಬ್ರಾರಖಾನ್ ಮಕ್ಬುಲಖಾನ್ ಮಿಠಾಯಿಗಾರ ಅವರು ದೂರು ನೀಡಿದ್ದಾರೆ.ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಹಾನಗಲ್ ಪೊಲೀಸರು ಹೇಳಿದರು.’ಮನೆಯ ಹಿಂದಿನ ಬಾಗಿಲನ್ನು ಯಾವುದೋ ಆಯಧದಿಂದ ಮೀಟಿ ಮುರಿದು ಕಳ್ಳರು ಒಳನುಗ್ಗಿದ್ದಾರೆ. ಮನೆಯಲ್ಲಿದ್ದ ₹ 4.76 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆ. ಮನೆಯಲ್ಲಿ ಯಾರೋ ಇಲ್ಲದ್ದನ್ನು ನೋಡಿಯೇ ಆರೋಪಿಗಳು ಕೃತ್ಯ ಎಸಗಿದ್ದಾರೆ’ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

