ಚಿಕ್ಕಮಗಳೂರು: ಅಧೀನ ಅಧಿಕಾರಿಗಳೊಂದಿಗೆ ದತ್ತ ಪೀಠಕ್ಕೆ ತೆರಳುತ್ತಿದ್ದ ಜಿಲ್ಲಾಧಿಕಾರಿಗಳ ಕಾರ್ಗೆ ಪ್ರವಾಸಿ ವಾಹನವೊಂದು ಡಿಕ್ಕಿ ಹೊಡೆದಿದೆ. ಚಿಕ್ಕಮಗಳೂರು ತಾಲೂಕಿನ ದತ್ತಪೀಠ ರಸ್ತೆಯ ಹಾಗಲ್ಖಾನ್ ಬಳಿ ಘಟನೆ ನಡೆದಿದೆ.ಜಿಲ್ಲಾಧಿಕಾರಿ ಶ್ರೀರಂಗಯ್ಯ ಸಂಚರಿಸುತ್ತಿದ್ದ ಕಾರ್ನ ಹಿಂಬದಿಯ ಬಂಪರ್ಗೆ, ಹಾಸನ ಮೂಲದ ಪೊರ್ಡ್ ಐಕಾನ್ ಕಾರ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಜಿಲ್ಲಾಧಿಕಾರಿಗಳ ಕಾರ್ನ ಬಂಪರ್ ಹಾಗೂ ಇಂಡಿಕೇಟರ್ಗಳು ಜಖಂಗೊಂಡಿವೆ. ಅದೃಷ್ಟವಶಾತ್ ಜಿಲ್ಲಾಧಿಕಾರಿಗಳು ಅಪಾಯದಿಂದ ಪಾರಾಗಿದ್ದಾರೆ. ಹಾಸನ ಮೂಲದ ಯುವಕರು ಸಂಚರಿಸುತ್ತಿದ್ದ KA 04 Z 0560 ನಂಬರ್ನ ಕಾರ್ ಹಾಗೂ ಯುವಕರ ಮೇಲೆ ಜಿಲ್ಲಾಧಿಕಾರಿಗಳು ಯಾವುದೇ ಕಾನೂನು ಕ್ರಮ ಜರುಗಿಸದಂತೆ ಸೂಚಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





