Breaking News

ಹುಬ್ಬಳ್ಳಿ ಬ್ರೇಕಿಂಗ್ :ಬೆಳ್ಳಂಬೆಳಗ್ಗೆ ಗುಂಡಿನ ಸದ್ದು!

ಹುಬ್ಬಳ್ಳಿ — ನಗರದ ಮಂಟೂರು ರಸ್ತೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಡ್ರಾಮಾಟಿಕ್ ಘಟನೆಯಲ್ಲಿ, ಕೊಲೆ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಮಹಮ್ಮದ್ ಮಲ್ಲಿಕ್ ಜಾನ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ
ಬಾಲರಾಜ್ ಅಲಿಯಾಸ್ ಬಂಗಾರ ಬಾಲ್ಯ ಮತ್ತು ಮಹ್ಮದ್ ಶೇಖ್ ಮೇಲೆ ಗುಂಡೇಟು ನಡೆಸಲಾಗಿದ್ದು, ಇಬ್ಬರಿಗೂ ಬಲಗಾಲಿಗೆ ಗುಂಡೇಟು ಬಿದ್ದಿದೆ. ಗುರುವಾರ ರಾತ್ರಿ ಮಂಟೂರು ರಸ್ತೆಯಲ್ಲಿ ಮಲ್ಲಿಕ್ ಜಾನ್‌ರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಸೆಟಲ್ಮೆಂಟ್‌ನ ಶ್ಯಾಮ್ ಜಾದವ್ ಗ್ಯಾಂಗ್‌ನಲ್ಲಿ ಸೇರಿಕೊಂಡಿದ್ದ ಆರೋಪಿಗಳು, ಎಂಡಿ ದಾವೂದ್ ಹಾಗೂ ಶ್ಯಾಮ್ ಜಾದವ್ ಗುಂಪಿನ ನಡುವಿನ ಗ್ಯಾಂಗ್ ವಾರ್ನ ಮುಂದುವರಿದ ಭಾಗವಾಗಿ ಈ ಕೊಲೆ ನಡೆದಿದೆ ಎಂದು ಮಾಹಿತಿ. ಫೈರಿಂಗ್ ಸಂದರ್ಭದಲ್ಲಿ ಇನ್ಸ್ಪೆಕ್ಟರ್ S.R. ನಾಯಕ್, ಪೇದ ನೂರ್ ಅಹ್ಮದ್ ನೀಲಗಾರ ಮತ್ತು ಚಲುವಾಡ ಗಾಯಗೊಂಡಿದ್ದು, ಮೂವರನ್ನೂ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಕೊಲೆ ಆರೋಪಿಗಳಿಗೆ ‘ಗುಂಡಿನ ರುಚಿ’ ತೋರಿಸಿದ್ದು, ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರಿದಿದೆ.

Share News

About Shaikh BigTv

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *