ಹುಬ್ಬಳ್ಳಿ: ರಾಜ್ಯಾದ್ಯಂತ ಟೊಮೊಟೋ ಬೆಳೆ ಬೆಲೆ ಗಗನಕ್ಕೇರಿದೆ. ಇತಿಹಾಸದಲ್ಲಿಯೇ ಇಷ್ಟೊಂದು ಬೆಲೆ ಬಂದಿರಲಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ ಅನ್ನದಾತರಿಗೆ ಚಿನ್ನದ ಬೆಲೆ. ಒಂದೆಡೆ ಬೆಳೆಗಾರರು ಲಾಭದಲ್ಲಿದ್ರೆ, ಕೊಳ್ಳುವವರು ಜೇಬಿಗೆ ಮಾತ್ರ ಬರೆ ಬೀಳುತ್ತಿದೆ. ಆದ್ರೆ ಧಾರವಾಡದ ರೈತ ಟೊಮೊಟೋ ಬೆಳೆದರೂ ಸಹ ಸಂಕಷ್ಟ ಎದುರಿಸುವಂತಾಗಿದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಪ್ರಕಾಶ ಸುಣಗಾರ ಎಂಬಾತರು ತಮ್ಮ ಒಂದೂವರೆ ಎಕರೆಯಲ್ಲಿ ಟೊಮೊಟೋ ಬೆಳೆದಿದ್ದರು. ಆದರೆ ಅದಕ್ಕೆ ಬೆಂಕಿ ರೋಗ ತಗುಲಿದ ಪರಿಣಾಮವಾಗಿ ಬೆಳೆಯಲ್ಲಾ ಹಾನಿಯಾಗುತ್ತಿದೆ. ಬೆಳೆ ಕೈಗೆ ಬಂದು ಹತ್ತುವ ವೇಳೆ ಮಾರುಕಟ್ಟೆಯಲ್ಲಿ ಟೊಮೊಟೋಗೆ 10 ರೂಪಾಯಿಗೆ ಕೆಜಿ ಯಾರೂ ಕೇಳುವವರಿಲ್ಲ. ಆದರೆ ಕಳೆದ 10 ದಿನಗಳಿಂದ ಟೊಮ್ಯಾಟೊಗೆ ಬಾರಿ ಬೆಲೆ ಬಂದು ಬಿಡ್ತು. ಈ ರೈತನ ಅದೃಷ್ಟವೇ ಸರಿಯಿಲ್ಲ ಅನ್ನೋ ಹಾಗಾಗಿದೆ. ಇದೇ ಸಮಯಕ್ಕೆ ಇವನು ಬೆಳೆದ ಟೊಮೊಟೊಗೆ ಬೆಂಕಿ ರೋಗ ತಗುಲಿ ಬಿಟ್ಟಿದೆ. ಇದರಿಂದ ಇಡಿ ಟೊಮೊಟೋ ಸಸಿಗಳು ಸತ್ತು ಹೋಗುತ್ತಿವೆ.ಟೊಮೆಟೊಗೆ ಚಿನ್ನದ ಬೆಲೆ, ಬೆಳೆಗಾರ ಫುಲ್ ಖುಷ್
ಇನ್ನು ಸದ್ಯ ಮಾರುಕಟ್ಟೆಯಲ್ಲಿ ಪ್ರತಿ 10 ಕಿಲೋ ಟೊಮೊಟೋಗೆ ಒಂದು ಸಾವಿರದಿಂದ ಸಾವಿರದ ಐನೂರು ದರ ಬಂದಿದೆ. ಆದರೆ ಈ ಬೆಂಕಿ ರೋಗ ಬಂದಿದ್ದರಿಂದ ಟೊಮೊಟೋ ಹಣ್ಣು ಎಲ್ಲ ಸಸಿಗಳಿಂದ ಉದುರುತ್ತಿವೆ. ಅಲ್ಲದೇ ಸಸಿಗಳೇ ಸತ್ತು ಹೋಗುತ್ತಿವೆ. ಇದರಿಂದ ಈ ರೈತನಿಗೆ ಒಂದೇ ವಾರದಲ್ಲಿ 2-4 ಲಕ್ಷ ರೂ. ನಷ್ಟವಾಗಿದೆ. ಒಂದೂವರೆ ಎಕರೆಯಲ್ಲಿ ಪ್ರತಿ ದಿನ ಏನಿಲ್ಲ ಅಂದರೂ 20 ಟೊಮೊಟೋ ತೆಗೆಬಹುದಿತ್ತು. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಈ ಬೆಂಕಿ ರೋಗ ಮಾಡಿದೆ. ಹೀಗಾಗಿ ಇದೆ ಮೊದಲ ಬಾರಿಗೆ ಬಂದಿದ್ದ ಬೆಲೆಯ ಇಷ್ಟೊಂದು ಟೊಮೊಟೋ ಬೆಳೆ ಹಾಳಾಯಿತಲ್ಲ ಎಂದು ರೈತ ಚಿಂತೆ ಮಾಡುವಂತಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news




