Breaking News

ಧಾರವಾಡ ಯುವತಿಯ ಶವ ಪತ್ತೆ – ಕೊಲೆ ಶಂಕೆ!

ಬೆಚ್ಚಿಬೀಳಿಸಿದ ಯುವತಿ ಕೊಲೆ ರಹಸ್ಯ..?

ವಿದ್ಯಾಕಾಶಿ ಧಾರವಾಡದಲ್ಲಿ 19 ವರ್ಷದ ಪ್ಯಾರಾಮೆಡಿಕಲ್‌ ವಿದ್ಯಾರ್ಥಿನಿ ಝಕಿಯಾ ಮುಲ್ಲಾ ಶವವಾಗಿ ಪತ್ತೆಯಾಗಿರುವ ಘಟನೆ ನಗರವನ್ನು ಬೆಚ್ಚಿಬೀಳಿಸಿದೆ. ಧಾರವಾಡದ ಹೊರವಲಯದ ಮನಸೂರು ರಸ್ತೆಯ ಸಮೀಪ ಇಂದು ಮುಂಜಾನೆ ಯುವತಿಯ ಶವ ಪತ್ತೆಯಾಗಿದೆ. ಗಾಂಧಿ ಚೌಕ್ ನಿವಾಸಿಯಾಗಿರುವ ಝಕಿಯಾ ಮುಲ್ಲಾ (19), ಪ್ಯಾರಾಮೆಡಿಕಲ್‌ ಶಿಕ್ಷಣ ಮುಗಿಸಿ ಉದ್ಯೋಗ ಹುಡುಕಾಟದಲ್ಲಿದ್ದಳು. ನಿನ್ನೆ ಮಂಗಳವಾರ

ಸಂಜೆ ಸುಮಾರು 4:30ರ ವೇಳೆಗೆ “ಲ್ಯಾಬ್‌ಗೆ ಹೋಗಿ ಬರುತ್ತೇನೆ” ಎಂದು ಹೇಳಿ ಮನೆಯಿಂದ ಹೊರಟಿದ್ದ ಝಕಿಯಾ, ರಾತ್ರಿ ವರೆಗೂ ಮನೆಗೆ ಮರಳಿರಲಿಲ್ಲ. ಮಗಳು ಮನೆಗೆ ಬಾರದ ಹಿನ್ನೆಲೆ ಆತಂಕಗೊಂಡ ಕುಟುಂಬಸ್ಥರು ರಾತ್ರಿ ಪೂರ್ತಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಇಂದು ಮುಂಜಾನೆ ಧಾರವಾಡದ ಮನಸೂರು ರಸ್ತೆಯ ಸಮೀಪ ಯುವತಿಯ ಶವ. ಯುವತಿಯನ್ನು ಬೇರೆ ಸ್ಥಳದಲ್ಲಿ ಬರ್ಬರವಾಗಿ ಕೊಲೆ ಮಾಡಿ, ಶವವನ್ನು ಇಲ್ಲಿ ತಂದು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿ ಪಡೆದ ತಕ್ಷಣ ಧಾರವಾಡ ಗ್ರಾಮೀಣ ಹಾಗೂ ವಿದ್ಯಾಗಿರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೋಟ್ – ಯುನಸ್ ಮುಲ್ಲಾ (ಝಕಿಯಾ ತಂದೆ): “ನಮ್ಮ ಮಗಳು ನಿನ್ನೆ ಸಂಜೆ ಲ್ಯಾಬ್‌ಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು ಮರಳಿ ಬಂದಿಲ್ಲ. ಇತ್ತೀಚಿಗಷ್ಟೇ ಪ್ಯಾರಾಮೆಡಿಕಲ್‌ ವಿದ್ಯಾಭ್ಯಾಸ ಮುಗಿಸಿ ಕೆಲಸ ಹುಡುಕುತ್ತಿದ್ದಳು. ಇಂದು ಈ ರೀತಿಯ ಘಟನೆ ನಡೆದಿರುವುದು ನಮಗೆ ನಂಬಲಾಗುತ್ತಿಲ್ಲ. ನಮ್ಮ ಮಗಳ ಸಾವಿಗೆ ಕಾರಣ ಏನು ಎಂಬುದನ್ನು ಪೊಲೀಸರು ತನಿಖೆ ಮಾಡಿ ನಮಗೆ ನ್ಯಾಯ ಕೊಡಬೇಕು.” ಯುವತಿಯ ಮೊಬೈಲ್ ಕರೆಗಳ ವಿವರಗಳ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು, ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About Shaikh BigTv

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *