Breaking News

ಅತ್ತೆ ಮಗನನ್ನೇ ಪ್ರೀತಿಸಿ ಮದುವೆಯಾದ ಯುವತಿ: ಹಳ್ಳಿಯಲ್ಲಿರಲು ಬೇಸರಗೊಂಡು ಮದುವೆಯಾದ ಎರಡೇ ತಿಂಗಳಿಗೆ ನವವಿವಾಹಿತೆ ಆತ್ಮಹತ್ಯೆ

ಕಲಬುರಗಿ ನಗರದ ಸಿದ್ದೇಸ್ವರ ಕಾಲೋನಿಯಲ್ಲಿ ನವವಿವಾಹಿತೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅನಸೂಯ ಆತ್ಮಹತ್ಯೆಗೆ ಶರಣಾಗಿರುವ ನವವಿವಾಹಿತೆ. ಅನಸೂಯ ಅತ್ತೆ ಮಗನನ್ನು ಪ್ರೀತಿಸಿ ವಿವಾಹವಾಗಿದ್ದರು. ಎರಡು ತಿಂಗಳ ಹಿಂದಷ್ಟೇ ಸಂಬಂಧಿಕರ ಸಮ್ಮುದಲ್ಲಿ ಮದುವೆಯಾಗಿತ್ತು. ಮದುವೆಯಾದ ಕೆಲ ದಿನಗಳಲ್ಲೇ ನವವಿವಾಹಿತೆಯ ಕನಸು ಕಮರಿಹೋಗಿದೆ. ಹಳ್ಳಿಯಲ್ಲಿ ವಾಸವಾಗುತ್ತಿರುವುದಕ್ಕೆ ಅನಸೂಯ ಬೇಸರಗೊಂಡಿದ್ದಳು. ಅನುಸೂಯ ಸಹೋದರಿಯರು ಬೆಂಗಳೂರು ಹಾಗೂ ಮುಂಬೈನಲ್ಲಿ ವಾಸವಾಗಿದ್ದರು. ತಾನು ಮದುವೆ ಬಳಿಕ ಕಲಬುರಗಿಯಂತಹ ಹಳ್ಳಿಗೆ ಬಂದು ನೆಲೆಸಿದ್ದು ಆಕೆಯನ್ನು ಘಾಸಿಗೊಳಿಸಿತ್ತು. ಮದುವೆ ಬಳಿಕ ಹಳ್ಳಿಯಲ್ಲಿರಲು ಬೇಸರ ವ್ಯಕ್ತಪಡಿಸಿದ್ದಳು. ಹಲವು ಬಾರಿ ಈ ಬಗ್ಗೆ ಮನೆಯಲ್ಲಿಯೂ ಹೇಳಿದ್ದಳು. ಇದೇ ವಿಚಾರವಾಗಿ ತೀವ್ರವಾಗಿ ಮನನೊಂದಿದ್ದ ಅನಸೂಯ ದುಡುಕಿನ ನಿರ್ಧಾರ ಕೈಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *