Breaking News

ಏ. 30 ರಂದು ಕರೋಕೆ ಸಿಂಗಿಂಗ್ ಕಾಂಪಿಟೇಶನ್ ಆಡಿಶನ್

ಹುಬ್ಬಳ್ಳಿ :ಜಾಕ್ಸ್ ಇಂವೆಟ್ಸ್ ಅರ್ಪಿಸುವ ಕರೋಕೆ ಸಿಂಗಿಂಗ್ ಕಾಂಪಿಟೇಶನ್ ಆಡಿಶನ್ ಕಾರ್ಯಕ್ರಮವನ್ನು ಇದೇ ದಿ. ೩೦ ಹಾಗೂ ಮೇ ೧ ರಂದು ನಗರದ ಅಶೋಕನಗರದ ಕನ್ನಡ ಭವನದಲ್ಲಿ ಬೆ. ೯ ರಿಂದ ಸಂಜೆ ೬ ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಮೀರ್ ಖಾನ್ ತಿಳಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ೧೫ ವರ್ಷದಿಂದ ೩೦ ವರ್ಷದೊಳಗಿನ ಕಿರಿಯರ ಆಡಿಶನ್ ಇದೇ ದಿ. ೩೦ ರಂದು ಜರುಗಲಿದೆ.

ಮೇ ೧ ರಂದು ೩೧ ವರ್ಷದಿಂದ ೫೦ ವರ್ಷಗಳವರೆಗಿನ ಹಿರಿಯರ ಆಡಿಶನ್ ಇರಲಿದ್ದು, ಬಹುಮಾನಗಳು ಇರಕಿವೆ.

ಹಿರಿಯರಿಗೆ ಪ್ರಥಮ ಬಹುಮಾನ ೧೦,೦೦೦ ರೂ, ದ್ವಿತೀಯ ಬಹುಮಾನ ೫೦೦೦. ಹಾಗೂ ತೃತೀಯ ಬಹುಮಾನ ೨೦೦೦. ರೂ, ಮತ್ತು ಕಿರಿಯರಿಗೆ ಪ್ರಥಮ ಬಹುಮಾನ ೧೫,೦೦೦, ದ್ವಿತೀಯ ಬಹುಮಾನ ೭.೦೦೦ ಹಾಗೂ ತೃತೀಯ ಬಹುಮಾನ ೨.೦೦೦. ರೂ ಇರಲಿದೆ ಎಂದರು.

ನೋಂದಣಿ ಮಾಡಲು ಕೊನೆಯ ದಿನಾಂಕ ೨೯ ಇರಲಿದ್ದು, ೩೦೦ ರೂ. ನೋಂದಣಿ ಪೀ ಇರಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿ.ಎಚ್.ನಾಯ್ಕ್, ಸುಬಾನ್, ಯೂಸೂಪ್ ಖಾನ್, ಶ್ರೀ ರಕ್ಷಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share News

About admin

Check Also

ಪ್ಯಾಂಟ್ ಜೇಬಿನಲ್ಲಿ ₹1.30 ಕೋಟಿ ಮೌಲ್ಯದ ಚಿನ್ನ ಸಾಗಿಸುತ್ತಿದ್ದ ಯುವಕನ ಬಂಧನ

ದೇವನಹಳ್ಳಿ: ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಅಕ್ಟೋಬರ್ 25ರಂದು …

Leave a Reply

Your email address will not be published. Required fields are marked *