Breaking News

ಜಿಲ್ಲೆಯಿಂದ ಜಿಲ್ಲೆಗೆ ಹೋಗಿ ಕಳ್ಳತನ ಮಾಡ್ತಿದ್ರು ಈಗ ಅಂದ‌ರ್..!

ಜಿಲ್ಲೆಯಿಂದ ಜಿಲ್ಲೆಗೆ ಹೋಗಿ ಕಳ್ಳತನ ಮಾಡ್ತಿದ್ರು ಈಗ ಅಂದ‌ರ್..!

ದುಡಿದು ತಿನ್ನೊದ ಬಿಟ್ಟು ಬಡಿದು ತಿಂತಿದ್ರು ಈ ಖತರ್ನಾಕ ಕಳ್ಳರು

ಗೋಕುಲ್ ರೋಡ್ ಪೊಲೀಸರ ಕಾರ್ಯಚರಣೆ ಯಶಸ್ಸು, ಕಂಬಿ ಹಿಂದೆ ಅಂತರ ಜಿಲ್ಲಾ ಕಳ್ಳರು

ಇಬ್ಬರು ಅಂತರ್ ಜಿಲ್ಲಾ ಮನೆಗಳ್ಳರ ಬಂಧನ 19.50 ಲಕ್ಷ ರೂ ಮೌಲ್ಯದ ಸ್ವತ್ತು ವಶ ಹುಬ್ಬಳ್ಳಿ ಉತ್ತರ ಉಪ ವಿಭಾಗದ ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 20/6/2024 ರಂದು ದಾಖಲಾಗಿದ್ದ ಮನೆಗಳ್ಳತನ ಪ್ರಕರಣವನ್ನು ಭೇದಿಸಲು ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉತ್ತರ ಉಪವಿಭಾಗದ ಎಸಿಪಿ ಶ್ರೀ ಶಿವಪ್ರಕಾಶ್ ನಾಯಕ್ ರವರ ನೇತೃತ್ವದಲ್ಲಿ ಗೋಕುಲ್ ರೋಡ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಪ್ರವೀಣ್ ನೀಲಮ್ಮನವರ್ ಮತ್ತವರ ಸಿಬ್ಬಂದಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು. ಸದರಿ ತಂಡವು

ಆರೋಪಿಗಳ ಸುಳಿವಿನ ಬಗ್ಗೆ ಮಾಹಿತಿ ಕಲೆಹಾಕಿ ಇಬ್ಬರು ಆರೋಪಿತರಾದ 1. ದೀಪಕ್ ರೋಹನ್ ತಂದೆ ನಾಗೇಂದ್ರ ಮಾತಂಗಿ. 28 ವರ್ಷ, ಖಾನಾಪುರ, ಬೆಳಗಾವಿ.2 ಶಿವನಾಗಯ್ಯ ಶಿವನಾಗು ತಂದೆ ಮುತ್ತಯ್ಯ ಉಮಚಗಿಮಠ. 26 ವರ್ಷ, ರೋಣ, ಗದಗ.ಎಂಬ ಇಬ್ಬರು ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ವಿಚಾರಣೆ ವೇಳೆ ಇದೇ ಇಬ್ಬರು ಆರೋಪಿಗಳು ಕಳ್ಳತನ ಮಾಡಿದ್ದ ‘ಗೋಕುಲ್ ರೋಡ್ ಠಾಣೆಯ 2, ವಿದ್ಯಾನಗರ ಠಾಣೆಯ 1, ಬೆಳಗಾವಿ ಮಾರಿಹಾಳ ಠಾಣೆಯ 2, ಖಾನಾಪುರ ಠಾಣೆಯ 2, ಬೆಳಗಾವಿ ಮಾಳಮಾರುತಿ ಠಾಣೆಯ 1, ಹೀಗೆ ಒಟ್ಟು 08 ಮನೆಗಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿದ್ದು, ಆರೋಪಿತರಿಂದ ಕಳ್ಳತನವಾಗಿದ್ದ, 1. 244 ಗ್ರಾಂ ತೂಕದ ಬಂಗಾರದ ಆಭರಣಗಳು 2. 2500 ಗ್ರಾಂ ತೂಕದ ಬೆಳ್ಳಿಯ ಆಭರಣಗಳು3. 01 ಲ್ಯಾಪಟಾಪ್4. 01 ಸ್ಕೂಟಿ 5. 02 ವಾಚ್6. ಕಳ್ಳತನಕ್ಕೆ ಬಳಸಿದ್ದ 1 ಬೈಕ್ ಹೀಗೆ ಒಟ್ಟು 19.50 ಲಕ್ಷ ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆಯನ್ನು ಮುಂದುವರೆಸಿರುತ್ತಾರೆ. ಸದರಿ ಮನೆಗಳ್ಳತನ ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಗೋಕುಲ್ ರೋಡ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮತ್ತವರ ತಂಡದ ಕಾರ್ಯವೈಖರಿಯನ್ನು ಮಾನ್ಯ ಪೋಲಿಸ್ ಆಯುಕ್ತರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.

Share News

About Shaikh BigTv

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *